ಉಳ್ಳಾಲ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರೀ ಮಹಿಳಾ ಮಂಡಳಿಯ ವತಿಯಿಂದ ಗಾಳದ ಕೊಂಕಣಿ ಸಮದಾಯದಲ್ಲಿ ಇದೇ ಮೊದಲಿಗೆ ಮಂಗಳೂರು ವಿಶ್ವವಿದ್ಯಾಯಲದಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾದ ಧನಲಕ್ಷ್ಮೀ ಮಿಥಿಲೇಶ್ ನಾಯಕ್ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮೀ ಎಂ.ನಾಯಕ್ ಮಾತನಾಡಿ, ಎಳೆಯ ಪ್ರಾಯದಲ್ಲೆ ಮಕ್ಕಳಿಗೆ ಸಂಸ್ಕಾರದ ಜೊತೆಗೆ ಶಿಕ್ಷಣಕ್ಕೆ ಹೆತ್ತವರು ಪ್ರೋತ್ಸಾಹಿಸಬೇಕು, ದೇವರ ಆರ್ಶೀವಾದ ಹಾಗೂ ಸಮಾಜಬಾಂಧವರ ಸಹಕಾರದಿಂದ ಪಿಎಚ್ ಡಿ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದರು.
ಜನಪ್ರಿಯತೆ,ಅಧಿಕಾರದ ಲಾಲಾಸೆಗಾಗಿ ಜೋತು ಬೀಳದೆ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಸಂಘಟನೆಯು ಬಲಗೊಳ್ಳುತ್ತದೆ ಎಂದರು. ಶ್ರೀ ಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ ಭಾನುವಾರ ನಡೆದ ಈ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಶಾರದಾ ಮೋಹನ್ ಅಸೈಗೋಳಿ ಅವರು ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಹರಿಣಾಕ್ಷಿ ಭಂಡಾರಬೈಲ್,ಮಾಜಿ ಅಧ್ಯಕ್ಷೆಯರಾದ ಹೇಮಾ ಮಂಕಿಸ್ಟ್ಯಾಂಡ್,ಕಸ್ತೂರಿ ಆರ್.ನಾಯಕ್ ಹಾಗೂ ಸಮಿತಿ ಪದಾಧಿಕಾರಿಗಳು,ಶ್ರೀಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್, ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಮಾಜಿ ಕಾರ್ಯದರ್ಶಿ ಕೋಡಿ ಜಯ ನಾಯಕ್ ,ಶ್ರೀ.ಸೋಮೇಶ್ವರೀ ಸೌ.ಸ.ಸಂಘ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಮೊದಲದವರಿದ್ದರು. ಸಂಘದ ಕಾರ್ಯದರ್ಶಿ ಮೋಹಿನಿ ಶೆಟ್ಟಿಬೊಟ್ಟು ಸ್ವಾಗತಿಸಿದರು.ಸದಸ್ಯೆ ರೇಣುಕಾ ಕಲ್ಲಾಪು ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.

