ಬಂಟ್ವಾಳ: ತಾಲ್ಲೂಕಿನ ಮಾಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ಸಿ.ರೋಡು ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕ ವತಿಯಿಂದ ಬುಧವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕಿ ಚಂದ್ರಾವತಿ, ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್, ಶಿಕ್ಷಕಿಯರಾದ ಅಮೃತಾ, ಭವ್ಯಶ್ರೀ, ಶಾರದಾ, ಶೀಲಾವತಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸತೀಶ ರಾವ್, ಸುಕುಮಾರ್ ಮತ್ತಿತರರು ಇದ್ದರು.
