ಬಂಟ್ವಾಳ : ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಸೈಲೆಂಟ್ ನವೋದಯ ಸ್ವಸಹಾಯ ಸಂಘ ವನ್ನು ನವೋದಯ ಸ್ವಸಹಾಯ ಸಂಘದ ಪೆರಾಜೆ ಗ್ರಾಮದ ನಿರ್ವಾಹಕಿ ಶ್ರೀಮತಿ ಮೋಹಿನಿ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು.86262893-433f-443e-b146-139764c39c67

ಅತಿಥಿಗಳಾಗಿ ಹಿರಿಯರಾದ ಶ್ರೀಮತಿ ಸರೋಜಿನಿ ಬಿ.ಪಿ, ಹಾಗು ಹರೀಶ್ ಮಂಜೊಟ್ಟಿ, ವಸಂತ ಟೈಲರ್, ಗಂಗಾಧರ ಗೌಡ ಅಲುಂಬುಡ, ಪಾಣಾರ ಸಂಘದ ಜಿಲ್ಲಾಧ್ಯಕ್ಷರಾದ ಜನಾರ್ಧನ್ ಮಡಲ, ಆನಂದ ಪೂಜಾರಿ ಇರ್ಕ್ಲಾಜೆ ಉಪಸ್ಥಿತರಿದ್ದರು.

ಸಂಘದ ನೂತನ ಅದ್ಯಕ್ಷರಾಗಿ ಗಂಗಾಧರ ಗೌಡ ಅಲುಂಬುಡ, ಕಾರ್ಯದರ್ಶಿ ಯಾಗಿ ಜನಾರ್ದನ್ ಮಡಲ, ಜೊತೆ ಕಾರ್ಯದರ್ಶಿ ಯಾಗಿ ಲೋಹಿತ್ ಮಡಲ, ಸಲಹೆಗಾರರಾಗಿ ಮಹೇಶ್ ಮಂಜೊಟ್ಟಿ, ಅಶ್ವತ್ ಜೋಗಿಬೆಟ್ಟು ಆಯ್ಕೆಯಾದರು.. ಪ್ರಶಾಂತ್ ಮಂಜೊಟ್ಟಿ ಸ್ವಾಗತಿಸಿ, ಗಣೇಶ್ ಮಡಲ ವಂದಿಸಿದರು..ಪ್ರದೀಪ್ ಮಡಲ ಮತ್ತು ಮನೋಹರ್ ಮಡಲ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *