ಮಂಗಳೂರು:  ಶ್ರೀಮತಿ ಧನಲಕ್ಷ್ಮಿ ಅವರು ಮಂಡಿಸಿದ ಪ್ರೌಢಪ್ರಬಂಧ “ವಿವಿಧ ಹಂತದ ಸ್ವಾಭಿಮಾನ ಹೊಂದಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಕೌಶಲಗಳು,ಆಧ್ಯಾತ್ಮಿಕ ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಗಳ ಮೇಲೆ ಜೀವನ ಕೌಶಲ್ಯಗಳನ್ನು ಕಲಿಸುವ ವಿಭಿನ್ನ ವಿಧಾನಗಳ ಪರಿಣಾಮಕಾರಿತ್ವ” ಈ ವಿಷಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು  ನೀಡಿದೆ.IMG-20200926-WA0066

ಇವರಿಗೆ ಮಂಗಳೂರಿನ ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ಸಹ  ಪ್ರಾಧ್ಯಾಪಕಿ ಡಾ. ವಿಜಯಕುಮಾರಿ ಎಸ್.ಎನ್  ಮಾರ್ಗದರ್ಶಕರಾಗಿದ್ದರು. ಧನಲಕ್ಷ್ಮಿಯವರು ಮಂಗಳೂರಿನ ಸೇಂಟ್ ಆನ್ಸ ಶಿಕ್ಷಣ ಮಹಾವಿದ್ಯಾಲಯ, ಸರ್ಕಾರಿ ಶಿಕ್ಷಕ -ಶಿಕ್ಷಣ ವಿದ್ಯಾಲಯ ಹಾಗೂ ಬಂಟ್ವಾಳದ ಎಸ್.ವಿ.ಎಸ್ ಪ್ರಾಥಮಿಕ,ಪ್ರೌಢ ಹಾಗೂ ಪದವಿ ಕಾಲೇಜಿನ ಹಳೆವಿದ್ಯಾರ್ಥಿ ಆಗಿದ್ದಾರೆ. ಪ್ರಸ್ತುತ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *