ಬಂಟ್ವಾಳ:  ಭಾರತೀಯ ಚಿತ್ರರಂಗ ಕಂಡ  ಅತ್ಯದ್ಭುತ ಗಾಯಕ ಪದ್ಮಶ್ರೀ, ಪದ್ಮಭೂಷಣ ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂರವರು 2018 ರಲ್ಲಿ ಬಂಟ್ವಾಳಕ್ಕೆ ಸಮೀಪದ ಮಾವಿನಕಟ್ಟೆಯಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದರ ದಶಮಾನೋತ್ಸವ ಮತ್ತು 40 ನೇ ವರ್ಷದ ವಾರ್ಷಿಕ ಸಂಭ್ರಮಾಚರಣೆಯಲ್ಲಿ 2 ದಿನದ ಕಾರ್ಯಕ್ರಮವನ್ನು ನೀಡಿದ್ದರು ಎಂದು ಸಂಸ್ಥೆಯ ಮಾಲಕ ವರದರಾಜಪೈ ನೆನಪಿಸಿದ್ದಾರೆ.IMG_20200925_171723

ಅವರು ಹಾಡುಗಾರ ಮಾತ್ರವಲ್ಲದೆ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು ಅವರಲ್ಲಿ ದೇವರ ಪ್ರತಿರೂಪ ವನ್ನು ನಾನು ಕಂಡಿದ್ದೇನೆ ಅವರಲ್ಲಿ ಮಾತನಾಡುವುದು ಎಂದರೆ ನನ್ನ ದೊಡ್ಡ ಭಾಗ್ಯವಾಗಿತ್ತು ಎಂದು ಅವರು ಸ್ಮರಿಸಿದ್ದಾರೆ. ಎಸ್ .ಪಿ.ಬಾಲಸುಬ್ರಹ್ಮಣ್ಯರವರುIMG_20200925_171844

ಒಂದು ದಿನದ ಕಾರ್ಯಕ್ರಮದ ಸಂಭಾವನೆಯನ್ನು ಕೂಡ ತೆಗೆದುಕೊಂಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ದೇವರು ಮೋಕ್ಷವನ್ನು ಕರುಣಿಸಲಿ ಎಂದು ಸಂಸ್ಥೆಯ ಮಾಲಕ ಪೈ ಪ್ರಾರ್ಥಿಸಿದ್ದಾರೆ. ಬಂಟ್ವಾಳದಂತ ಗ್ರಾಮೀಣ ಭಾಗದಲ್ಲಿ  ಅಂದು ಎಸ್.ಪಿ.ಬಿ.ಅವರ ಗಾನಸುಧೆಯನ್ನು ಆಲಿಸಲು ಬಂಟ್ವಾಳ ಸಹಿತ ಸುತ್ತಮತ್ತಲ ಪರಿಸರ ಸಾವಿರಾರು ಮಂದಿ ಭಾಗವಹಿಸಿದ್ದರು.ಅವರು ಆಗ ಹಾಡಿರುವ ಒಂದೊಂದು ಹಾಡು ಈಗಲು ಅನುರುಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ

 

By suddi9

Leave a Reply

Your email address will not be published. Required fields are marked *