ಬಂಟ್ವಾಳ: ಭಾನುವಾರ ಸುರಿದ ಗಾಳಿ,ಮಳೆಗೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಎಂಬಲ್ಲಿ ಪರಿಶಿಷ್ಟ ಜಾತಿಯ ಬಾಬು ಎಂಬವರ ಮನೆಯು ಬಿದ್ದು ಪೂರ್ತಿ ಹಾನಿಯಾಗಿರುವ ಹಿನ್ನಲೆಯಲ್ಲಿ  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್.ಸಿ ಮೋರ್ಚಾದ ನಿಯೋಗ ಭೇಟಿ ನೀಡಿ 25 ಕೆಜಿ ಅಕ್ಕಿ ಸಹಿತ ಆಹಾರ ಕಿಟ್ಟನ್ನು ವಿತರಿಸಲಾಯಿತು.

IMG-20200923-WA0039ಬಂಟ್ವಾಳ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಹರಿಸಿ ಸರಕಾರದ ವತಿಯಿಂದ ತುರ್ತಾಗಿ ಪರಿಹಾರ ಧನವನ್ನು ಮಂಜೂರುಗೊಳಿಸಲು ಎಸ್.ಸಿ ಮೋರ್ಚಾದ ವತಿಯಿಂದ ಪ್ರಾಮಾಣಿಕ ಪ್ರಯತ್ನಿಸುವುದಾಗಿ ಎಸ್.ಸಿ ಮೋರ್ಚಾ ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಕೇಶವ ದೈಪಳ ,ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು  ಮನೆಯವರಿಗೆ ಭರವಸೆಯಿತ್ತು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಎಸ್.ಸಿ ಮೋರ್ಚಾದ ಉಪಾಧ್ಯಕ್ಷರಾದ ಸಂತೋಷ್ ಬಿ.ಮೂಡ, ಕಾರ್ಯದರ್ಶಿ ಲೋಕೇಶ್ ಕೊಪ್ಪಲಕೋಡಿ, ಸದಸ್ಯರಾದ ಹರೀಶ್ ನಾವುರ, ಹಾಗೂ  ವಾಣಿ,  ಭರತ್ ರಾಜ್, ರವಿರಾಜ್, ಹಿರಿಯರಾದ ಭವಾನಿ ಎಸ್, ಭವಾನಿ.ಕೆ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *