ಬಂಟ್ವಾಳ: ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಜನ್ಮದಿನದ ಪ್ರಯುಕ್ತ ನಡೆಯುವ ಪಕ್ಷದ ಸೇವಾ ಸಪ್ತಾಹ ಕಾರ್ಯಕ್ರಮ ಹಾಗೂ ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆಯ ಕುರಿತಂತೆ ಬಂಟ್ವಾಳ ಕ್ಷೇತ್ರದ ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯು ಭಾನುವಾರ ನಡೆಯಿತು. ಬಿಜೆಪಿ ಸಂಗಬೆಟ್ಟು ಮಹಾಶಕ್ತಿಕೇಂದ್ರದ ಅಧ್ಯಕ್ಷ ಸೀತಾರಾಮ ಪೂಜಾರಿಯವರ ಅಧ್ಯಕ್ಷತೆಯಲ್ಲಿ ರಾಯಿ ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.
ಮುಂದಿನ ದಿನಗಳಲ್ಲಿ ನಡೆಯುವ ಪಕ್ಷದ ಸೇವಾ ಸಪ್ತಾಹ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಪೂವ೯ ಸಿದ್ದತೆ ಬಗ್ಗೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮಟ್ಟದ ಗ್ರಾಮ ಪಂಚಾಯತ್ ಚುನಾವಣಾ ಪ್ರಮುಖರಾದ ಬಿ. ದೇವದಾಸ ಶೆಟ್ಟಿಯವರು ಮಾಹಿತಿ ನೀಡಿದರು. ಸಭೆಯಲ್ಲಿ ಸಂಗಬೆಟ್ಟು ಮಹಾಶಕ್ತಿಕೇಂದ್ರದ ಪ್ರಭಾರಿಯಾಗಿರುವ ವೆಂಕಟೇಶ್ ನಾವಡ ಪೊಳಲಿ , ಬಿಜೆಪಿ ಕ್ಷೇತ್ರಸಮಿತಿ ಪ್ರ. ಕಾರ್ಯದಶಿ೯ ರವೀಶ್ ಶೆಟ್ಟಿ , ಕ್ಷೇತ್ರದ ಕಾರ್ಯದಶಿ೯ಗಳಾದ ಪೂರುಷೋತ್ತಮ ಶೆಟ್ಟಿ ವಾಮದಪದವು, ಹಷಿ೯ಣಿ, ಕೋಶಾಧಿಕಾರಿ ಪ್ರಕಾಶ್ ಅಂಚನ್,ಜಿಲ್ಲಾ ರೈತ ಮೋಚಾ೯ದ ಪ್ರ. ಕಾರ್ಯದಶಿ೯ ವಸಂತ ಅಣ್ಣಳಿಕೆ,ಕಾರ್ಯದಶಿ೯ಸಂಜೀವ ಪೂಜಾರಿ, ಜಲಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್,ಮಂದಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
