ಬಂಟ್ವಾಳ : ಜೇನು ಕೃಷಿಯಿಂದ ನೈಸರ್ಗಿಕ ವಾಗಿ ಪರಾಗಸ್ಪರ್ಶವಾಗುವ ಮೂಲಕ ಪರಿಸರದ ಎಲ್ಲ ಬೆಳೆಗಳು ಸಮೃದ್ಧ ವಾಗುತ್ತದೆ , ವಾಣಿಜ್ಯವಾಗಿಯೂ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಅವರು ಹೇಳಿದ್ದಾರೆ. ತೋಟಗಾರಿಕಾ ಇಲಾಖೆ ಬಂಟ್ವಾಳ ತಾಲೂಕು ವತಿಯಿಂದ 2020-21 ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಎರಡು ದಿನಗಳ ಜೇನು ಕೃಷಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು

ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕರಾದ ಪ್ರದೀಪ್ ಡಿಸೋಜಾ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಜೇನು ಕೃಷಿಗೆ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ ಯಿಂದ ಸಹಾಯಧನ ದೊರಕುತ್ತದೆ ಎಂದರು. ವೇದಿಕೆಯಲ್ಲಿ ಪತ್ರಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ಪುದು ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ , ಪ್ರಗತಿಪರ ಕೃಷಿಕರಾದ ಶಾಂತ ಡಿ ಚೌಟ , ತರಬೇತುದಾರರಾದ ರಾಧಾಕೃಷ್ಣ ಆರ್. ಕೋಡಿ ಉಪಸ್ಥಿತರಿದ್ದರು ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು
