ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಡಗಕಜೆಕಾರು- ತೆಂಕಕಜೆಕಾರು ಇದರ ನೇತೃತ್ವದಲ್ಲಿ ಕಜೆಕಾರು ಸಿ.ಎ. ಬ್ಯಾಂಕ್ ಹಾಗೂ ಹಿಂದೂ ಜಾಗರಣಾ ವೇದಿಕೆ ಪಾಂಡವರಕಲ್ಲು ಇದರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣಾ ಕಾರ್ಯಕ್ರಮ ಪಾಂಡವರಕಲ್ಲು ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ಜರಗಿತು.
ಕರ್ನಾಟಕ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಇದಾಗಿದ್ದು, ಬಡವರ ಬಗ್ಗೆ ಅಪಾರ ಕಾಳಜಿಯುಳ್ಳ ಈ ಯೋಜನೆಯ ಪ್ರಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಕಜೆಕಾರು ಸ.ವ್ಯ.ಸಂಘದ ಅಧ್ಯಕ್ಷ ವಿನ್ಸೆಂಟ್ ಮನೋಹರ್ ಸೇರಾ, ಉಪಾಧ್ಯಕ್ಷ ರೊಹಿನಾಥ್ ಕರ್ಂಬ ಡ್ಕ,ಕಜೆಕಾರು ಬಿ.ಜೆ.ಪಿ. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಚಿದಾನಂದ ರೈ, ಬಡಗಕಜೆಕಾರು ಗ್ರಾ.ಪಂ. ಮಾಜಿ ಅಧ್ಯಕ್ಷ ವಜ್ರ ಪೂಜಾರಿ, ಪಾಂಡವರಕಲ್ಲು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರದೀಪ್ ಕೋಡಿಬೆಟ್ಟು, ಸರಪಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಭು ಉಪಸ್ಥಿತರಿದ್ದರು.
ವಾಸು ದೇವಾಡಿಗ ಸ್ವಾಗತಿಸಿದರು. ಪ್ರಕಾಶ್ ಕರ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
