ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕರ ಪರಿಷತ್( ರಿ.) ಇದರ ಬಂಟ್ವಾಳ, ಮಂಗಳೂರು, ಬೆಳ್ತಂಗಡಿ, ಪುತ್ತೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಚಿಂತನ ಮಂಥನ ಬಂಟ್ವಾಳ ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ನಡೆಯಿತು. 
ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರು,ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ಅಂತ ರಾಜೇಶ್ ನಡವಂತ್ತಿಲ್ಲಾಯ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಇನ್ನೊರ್ವ ನಿರ್ದೇಶಕರು, ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಡಾ ವೇ.ಮೂ ಬಿ.ಎಸ್ .ರಾಘವೇಂದ್ರ ಭಟ್ ಪರಿಷತ್ತಿನ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಪದಾಧಿಕಾರಿಗಳಾದ ವೇ.ಮೂ. ಕೃಷ್ಣ ಉಪಾಧ್ಯಾಯ, ವೇ.ಮೂ. ಹರಿ ಉಪಾಧ್ಯಾಯ, ರಾಘವೇಂದ್ರ ಹೊಳ್ಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ಬಂಟ್ವಾಳ ನಾಗರಾಜ ಭಟ್, ಸುಳ್ಯ ತಾಲೂಕುಘಟಕದ ಪದಾಧಿಕಾರಿಗಳಾದ ವೇ.ಮೂ. ಶಿವರಾಮ ಮಯ್ಯ ,ಈಶ್ವರ ಭಟ್ ಶ್ರೀನಿಧಿ ಮುಚ್ಚಿನ್ನಾಯ, ಪೈಕ ವೆಂಕಟ್ರಮಣ ಭಟ್ ,ರಾಜಗೋಪಾಲ ಆಚಾರ್ಯ, ಅನಂತಪದ್ಮನಾಭ ಆಚಾರ್ಯ, ಎo. ಸುಬ್ರಹ್ಮಣ್ಯ ಭಟ್,ಸುದರ್ಶನ ಬಲ್ಲಾಳ್, ರಾಘವೇಂದ್ರರಾವ್, ಬಾಲಕೃಷ್ಣ ಕಾರಂತ, ಕೆ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮೀಸಲಾತಿ,ಜಾತಿಪ್ರಮಾಣಪತ್ರ,ಸಂಘಟನೆ, ಸರಕಾರದ ಅನುದಾನ ಸದ್ಬಳಕೆ ಮೊದಲಾದ ವಿಷಯಗಳ ಕುರಿತು ಚಿಂತನ ಮಂಥನ ನಡೆಯಿತು
