ಬಂಟ್ವಾಳ:  ಮಾಜಿ ಸಚಿವ ಬಿ ರಮಾನಾಥ ರೈಯವರ ಹುಟ್ಟುಹಬ್ಬದ ಪ್ರಯುಕ್ತ  ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಸೆ.13 ರಂದು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಹಾಗೆಯೇ ಇರ್ವತ್ತೂರು ವಲಯ ಕಾಂಗ್ರೆಸ್ ಸಮಿತಿ ಇದರ ನೇತೃತ್ವದಲ್ಲಿ ಹಾಗೂ ಯುವ ಕಾಂಗ್ರೆಸ್ ಬಂಟ್ವಾಳ ಇದರ ಸಹಕಾರದಿಂದ ಇರ್ವತ್ತೂರಿನ ಕಲಾಬಾಗಿಲು ಬುರೂಜ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ರಕ್ತದಾನ ಶಿಬಿರವು ದೇರಳಕಟ್ಟೆ ಜಸ್ಟೀಸ್ ಕೆ.ಎಸ್ .ಹೆಗ್ಡೆ ಆಸ್ವತ್ರೆಯ ಸಹಕಾರದಿಂದ ಆದೇದಿನ ಬೆಳ್ಳಿಗೆ ಗಂಟೆ ೯:೦೦ ರಿಂದ ಮಧ್ಯಾಹ್ನ ೧:೦೦ ಗಂಟೆಯವರೆಗೆ ನಡೆಯಲಿದೆ.ಈ ಶಿಬಿರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ರಕ್ತದಾನ ಮಾಡುವಂತೆ ಬಂಟ್ವಾಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *