ಬಂಟ್ವಾಳ: ಸೆ.10ರಂದು ಯುವವಾಹಿನಿ ಬಂಟ್ವಾಳ ವತಿಯಿಂದ ಕಸಾಪ ಮಾಜಿ ತಾಲೂಕು ಅಧ್ಯಕ್ಷ ಹಾಗೂ ಯುವವಾಹಿನಿಯ ಕೇಂದ್ರ ಸಮಿತಿ ಗೌರವ ಸಲಹೆಗಾರ ಬಿ.ತಮ್ಮಯ ಅವರ ಸಂಸ್ಮರಣೆ ಬಿ.ಸಿ.ರೋಡಿನ ಬಸ್ ನಿಲ್ದಾಣದ ಪಕ್ಕ ಇರುವ ಯುವವಾಹಿನಿ ಭವನದಲ್ಲಿ ನಡೆಯಲಿದೆ.
ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾಗಿ ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿ, ಬಂಟ್ವಾಳ ತಾಲೂಕು ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ತುಳುಲಿಪಿಯ .ಶಿಕ್ಷಕರಾಗಿ  ಹತ್ತು ಹಲವಾರು ಸಂಸ್ಥೆಗಳಲ್ಲಿ ನಾಯಕತ್ವ, ಮಾರ್ಗದರ್ಶನ ಹಾಗೂ ಸ್ನೇಹ ಜೀವಿಯಾಗಿ ದುಡಿದ.ಬಿ ತಮ್ಮಯ ಅವರ ಸಂಸ್ಮರಣೆ ಗುರುವಾರ ಸಂಜೆ 5 ಗಂಟೆಗೆ ನಡೆಯಲಿದೆ.
 ಈ ಕುರಿತು ಸಿದ್ಧತಾ ಸಭೆಯೊಂದು ಯುವವಾಹಿನಿ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಬಂಟ್ವಾಳ ತಾಲೂಕು ಘಟಕದ ಉಪಾಧ್ಯಕ್ಷರಾದ ಸುಂದರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಘಟಕದ ಮಾಜಿ ಅಧ್ಯಕ್ಷರಾದ ಬಿ. ಶ್ರೀಧರ ಅಮೀನ್ ಲೋಕೇಶ್ ಸುವರ್ಣ, ಅರುಣ್ ಕುಮಾರ್ ಘಟಕದ ಕಾರ್ಯದರ್ಶಿಗಳಾದ ಪುರುಷೋತ್ತಮ ಕಾಯರ್ ಪಲ್ಕೆ, ಕೋಶಾಧಿಕಾರಿ ಗಣೇಶ್ ಪೂಜೆರೆ ಕೊಡಿ, ನಿರ್ದೇಶಕರಾದ ಸುನಿಲ್  ಮರ್ದೊಳಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *