ಬಂಟ್ವಾಳ:ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿಯವರ ಆಯುಷ್ಮಾನ್ ಯೋಜನೆ ಜನಸಾಮಾನ್ಯರಿಗೆ ತುಂಬಾ ಪ್ರಯೋಜನದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ. ಬಂಟ್ವಾಳ ತಾ.ನ ಶಂಭೂರು ಬಿ.ಜೆ.ಪಿ ಬೂತ್ ಸಮಿತಿ ಹಾಗೂ ವ್ಯಾಯಾಮ ಶಾಲಾ ಸಹಭಾಗಿತ್ವದಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಪ್ರಧಾನ ಮಂತ್ರಿಯವರ ಜನಪರ ಯೋಜನೆ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾರ್ಯಕರ್ತರು ಶಾಸಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಕಮಾಲಾಕ್ಷಿ ಕೆ ಪೂಜಾರಿ, ಮಂಡಲದ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ಮಂಡಲ ಕಾರ್ಯದರ್ಶಿ ರಮಾನಾಥ ರಾಯಿ, ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಯಶೋಧರ ಕರ್ಬೇಟ್ಟು, ಸದಾಶಿವ ಬರಿಮಾರು, ಕ್ಷೇತ್ರ ಸಮಿತಿ ಸದಸ್ಯ ಜಿನ್ರಾಜ್ ಕೋಟ್ಯಾನ್, ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ದಿವಾಕರ ಶಂಭೂರು, ಜಯರಾಜ್ ಕೆ, ಉದಯರಾಜ್, ಹೇಮಲತಾ, ಬೂತ್ ಸಮಿತಿ ಅಧ್ಯಕ್ಷರಾದ ಯೋಗೀಶ, ಸಂತೋಷ್, ಕಾರ್ಯದಶಿಗಳಾದ ಪ್ರಕಾಶ್ ಎಂ, ಕೇಶವ ಬಿ, ಪ್ರಗತಿ ಪರ ಕೃಷಿಕರಾದ ಬಾಲಕೃಷ್ಣ ಹೊಳ್ಳ, ನಿವೃತ್ತ ಅಂಚೆ ಅಧಿಕಾರಿ ಕಮಲಾಕ್ಷ ಬಿ, ವ್ಯಾಯಾಮ ಶಾಲಾ ಕಾರ್ಯದರ್ಶಿ ಬೋಜರಾಜ್, ಕೋಶಾಧಿಕಾರಿ ಕಮಲಾಕ್ಷ ಎಸ್, ವ್ಯಾಯಾಮ ಶಾಲಾ ಸದಸ್ಯರಾದ ದಿನೇಶ್, ರಾಘವ್ ಆಚಾರ್ಯ, ಗಣೇಶ್, ವಿಕ್ಷೀತ್, ಹೇಮಂತ್, ಕಿಶೋರ್ ಉಪಸ್ಥಿತರಿದ್ದರು. ಮಂಡಲದ ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಆನಂದ ಎ ಶಂಭೂರು ಸ್ವಾಗತಿಸಿ ವಂದಿಸಿದರು.