ಬಂಟ್ವಾಳ: ಇಲ್ಲಿನ ಕೊಯಿಲ ಸರಕಾರಿ ಪ್ರೌಢಶಾಲೆಯ ಇಬ್ಬರು ಸಹೋದರಿಯರಿಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮರು ಮೌಲ್ಯಮಾಪನದಿಂದ ಹೆಚ್ಚುವರಿ ಅಂಕ ದೊರೆತಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣದಿಂದ ಉತ್ತೀರ್ಣಗೊಂಡಿದ್ದಾರೆ.   6btl-latha

ಈ ಹಿಂದೆ ಒಟ್ಟು 609 ಅಂಕ ಗಳಿಸಿದ್ದ ವಿದ್ಯಾರ್ಥಿನಿ ಗೀತಾ ಎಚ್. ಈಕೆಗೆ ಮರು ಮೌಲ್ಯಮಾಪನದಿಂದ ಒಟ್ಟು 615 (ಶೇ 98.40) ಅಂಕ ದೊರೆತು ಜಿಲ್ಲೆಯಲ್ಲೇ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ-124 ರ ಬದಲಿಗೆ 125, ಗಣಿತ-97ರ ಬದಲಿಗೆ 98, ಇಂಗ್ಲೀಷ್-94ರ ಬದಲಿಗೆ 95, ಹಿಂದಿ-95ರ ಬದಲಿಗೆ 98 ಅಂಕ ಸಿಕ್ಕಿದೆ.6btl-Geetha

ಇನ್ನೊಂದೆಡೆ ಈ ಹಿಂದೆ ಒಟ್ಟು 596 ಅಂಕ ಗಳಿಸಿದ್ದ ವಿದ್ಯಾರ್ಥಿನಿ ಲತಾ ಎಚ್. ಈಕೆಗೆ ಮರು ಮೌಲ್ಯಮಾಪನದಿಂದ ಒಟ್ಟು 603 ಅಂಕ ದೊರೆತಿದೆ. ಕನ್ನಡ -124 ರಬದಲಿಗೆ 125, ಗಣಿತ-94 ರ ಬದಲಿಗೆ 96, ವಿಜ್ಞಾನ-91 ರ ಬದಲಿಗೆ 93, ಇಂಗ್ಲೀಷ್ -88 ರ ಬದಲಿಗೆ 90 ಅಂಕ ಗಳಿಸಿದೆ. ಇವರಿಬ್ಬರೂ ಅವಳಿ-ಜವಳಿ ವಿದ್ಯಾರ್ಥಿಗಳಾಗಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಕೂಡಾ ಮರು ಮೌಲ್ಯ ಮಾಪನದಿಂದ ಉತ್ತೀರ್ಣಗೊಳ್ಳುವ ಮೂಲಕ ಶಾಲೆಗೆ ಒಟ್ಟು ಶೇ.78.48 ಫಲಿತಾಂಶ ದೊರೆತಿದೆ ಎಂದು ಮುಖ್ಯಶಿಕ್ಷಕ ಸುಧೀರ್ ಜಿ. ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *