ಬಂಟ್ವಾಳ: ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ನಾರಾಯಣ ಮೂಲ್ಯ (82) ಅವರು ಪಿಲಾತಬೆಟ್ಟು ಗ್ರಾಮದ ನಯನಾಡುವಿನಲ್ಲಿರುವ ತಮ್ಮ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರು ಪತ್ನಿ,ನಾಟಕ ಕಲಾವಿದ ಎಚ್.ಕೆ.ನಯನಾಡು ಸೇರಿದಂತೆ ಇಬ್ಬರು ಗಂಡು, ಒರ್ವ ಪುತ್ರಿ ಹಾಗೂ ಬಂಧು,ಬಳಗವನ್ನು ಅಗಲಿದ್ದಾರೆ.ಬಂಟ್ವಾಳ ತಾಲೂಕಿನ ಸಹಿತ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿ,ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿವೃತ್ತಿ ಹೊಂದಿದ್ದರು.ಬಳಿಕ ಒಂದಷ್ಟು ಸಾಮಾಜಿಕ ಕ್ಷೇತ್ರದಲ್ಲಿಯು ತೊಡಗಿಸಿಕೊಂಡು ಸ್ಥಳೀಯವಾಗಿ ಜನಾನುರಾಗಿದ್ದರು.ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
