ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ಎದುರು ಸೆ. 2ರಂದು ಮಧ್ಯಾಹ್ನ ಓವರ್‍ಟೇಕ್ ಭರಾಟೆಯಲ್ಲಿದ್ದ ಕಾರೊಂದಕ್ಕೆ ಎದುರಿನಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ, ಬೈಕಿನಲ್ಲಿದ್ದ ಇಬ್ಬರಲ್ಲಿ ಒಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಲಾರಿ ಹಿಂದಿಕ್ಕುವ ತರಾತುರಿಯಲ್ಲಿದ್ದ ಕಾರು ಮಂಗಳೂರಿನ ಕಡೆಗೆ ಸಾಗುತ್ತಿದ್ದರೆ, ಬೈಕ್ ಗುರುಪುರದತ್ತ ಹೋಗುತ್ತಿತ್ತು. ಕಾರಿಗೆ ಡಿಕ್ಕಿಯಾದ ಬೈಕ್‍ನಲ್ಲಿದ್ದ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಕಿನಲ್ಲಿದ್ದವರು ಸುರತ್ಕಲ್‍ನವರೆಂದು ಹೇಳಲಾಗುತ್ತಿದ್ದು, ಬಜ್ಪೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

