ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದಲ್ಲಿ ಸುಮಾರು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ  ಅನುಷ್ಠಾನಗೊಂಡ ವಿವಿಧ ಕಾಮಗಾರಿಯನ್ನು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೃಷ್ಣಾಪುರ ಪರಿಶಿಷ್ಟ ಜಾತಿ ಕಾಲೊನಿಯ ಕಿಂಡಿ ಅಣೆಕಟ್ಟನ್ನು ಶೀಘ್ರದಲ್ಲಿಯೇ  ಲೋಕಾರ್ಪಣೆಗೊಳಿಸಲಾಗುವುದಲ್ಲದೆ ಮತ್ತು ಮುಂದಿನ ದಿನಗಳಲ್ಲಿ ಹಂತ,ಹಂತವಾಗಿ ಈ ಗ್ರಾಮದ ಅಭಿವೃದ್ಧಿಪಡಿಸಲಾಗುವುದು ಎಂದರು.  ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಅವರು  ಶಾಂತಿ ಪಾಲಿಕೆ ಪರಿಶಿಷ್ಟ ಜಾತಿ ಕಾಲೊನಿಯಕಾಂಕ್ರಿಟೀಕರಣ ರಸ್ತೆ ,  ಅಮ್ಟೂರು ಗ್ರಾಮದ ಪೊಯ್ಯೆಕಂಡ ಕೃಷ್ಣಾಪುರಕ್ಕೆ ಹೋಗುವ ರಸ್ತೆ ಹಾಗೂ ಅಮ್ಟೂರು ಗ್ರಾಮದ  ಜಂಕ್ಷನ್ನಲ್ಲಿ ಹೈಮಾಸ್ಟ್  ದೀಪವನ್ನು  ಉದ್ಘಾಟಿಸಿ ಲೋಕಾರ್ಪಣೆಗೈದರು.

IMG-20200831-WA0076ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತ್ ಸದಸ್ಯೆ ಕಮಲಾಕ್ಷಿ ಪೂಜಾರಿ,ತಾಲೂ ಪಂಚಾಯಿತ್ ಸದಸ್ಯ ಮಹಾಬಲ ಆಳ್ವ,ಗೋಳ್ತಮಜಲು  ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಮುಸ್ತಪಾ, ಬಂಟ್ವಾಳ  ಕ್ಷೇತ್ರ ಬಿಜೆಪಿಯ ಕಾರ್ಯದರ್ಶಿ ಮಾಣಿ ಗಣೇಶ್ ರೈ , ಗೋಳ್ತಮಜಲು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮಾನಾಥ ರಾಯಿ, ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಹಿಳಾ ಮೋರ್ಚಾ ಮೋರ್ಚಾದ ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು , ಗೋಳ್ತಮಜಲು ಗ್ರಾಮ ಪಂಚಾಯತ್ ನ  ಮಾಜಿ  ಸದಸ್ಯರಾದ ಗೋಪಾಲ್ ಕೃಷ್ಣ ಪೂವಳ, ಗೋಪಾಲ್ ಪೂಜಾರಿ, ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲಿಯಾನ್

IMG-20200831-WA0075 ಸ್ಥಳೀಯ ಹಿರಿಯರಾದ ವಿಠಲ ಪ್ರಭು, ಅಮ್ಟೂರು  ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶರತ್  ಅಮ್ಟೂರು, ಬೂತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಶಾಂತಿ ಪಳಿಕೆ, ಪಕ್ಷದ ಪ್ರಮುಖರಾದ ವಿಶಾಲ ಡಿ. ಶೆಟ್ಟಿ ಬಾಳಿಕೆ, ಕಾಂತಪ್ಪ ಶೆಟ್ಟಿ ಬಾಳಿಕೆ,ರಾಜೇಶ್ ಶಾಂತಿ, ಪುರುಷೋತ್ತಮ್ ಟೈಲರ್,  ದೇವಕಿ ಪೂಜಾರಿ, ದಿವಾಕರ ಪೂಜಾರಿ, ವಿಖ್ಯಾತ್ ಶೆಟ್ಟಿ ಬಾಳಿಕೆ,  ಹರೀಶ್ ಬಟ್ಟೆ ಹಿತ್ಲು ,ವಸಂತ ಬಟ್ಟೆ ಹಿತ್ಲು, ರತಿನ್ ಪೂಜಾರಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.  ತಾಲ್ಲೂಕು ಪಂಚಾಯಿತ್ ನ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ. ಪ್ರಾಸ್ತಾವಿಸಿದರು.  ಬೂತ್ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಂದಿಸಿದರು.IMG-20200831-WA0073

By suddi9

Leave a Reply

Your email address will not be published. Required fields are marked *