ಬಂಟ್ವಾಳ:ಕೊರೊನ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವದ ಹಂಗು ತೊರೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ ಫರಂಗಿಪೇಟೆ , ತುಂಬೆ ಕ್ಲಿನಿಕ್ ನ್ನು ನಡೆಸುತ್ತಿದ್ದ ವೈದ್ಯರುಗಳನ್ನು ಗುರುತಿಸಿ ಬಿಜೆಪಿ ಪುದು ಮಹಾ ಶಕ್ತಿ ಕೇಂದ್ರ ದ ವತಿಯಿಂದ ಸನ್ಮಾನಿಸಲಾಯಿತು. 

ಮಂಜೇಶ್ವರ ಕೊರೊನ ಫ್ರಂಟ್ ಲೈನ್ ಚಿಕಿತ್ಸಾ ಕೇಂದ್ರದ ನೋಡೆಲ್ ಅಧಿಕಾರಿ, ಫರಂಗಿಪೇಟೆ ಸುರಕ್ಷಾ ಕ್ಲಿನಿಕ್ ನ ವೈದ್ಯರಾದ ಡಾ. ಪ್ರಭಾಕರ ರೈ ಎಂ , ಸುರಕ್ಷಾ ಕ್ಲಿನಿಕ್ ನ ಆಯುರ್ವೇದ ವೈದ್ಯೆ ಶಾರಿಕಾ ಪಿ ರೈ , ಫರಂಗಿಪೇಟೆ ಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಅಜಿತ್ ಕುಮಾರ್ , ತುಂಬೆಯ ಗುಲಾಬಿ ಕ್ಲಿನಿಕ್ ನ ವೈದ್ಯರಾದ ಡಾ ರಘುರಾಮ್ ಶೆಟ್ಟಿ ಗುಳ್ಳಾಡಿ ಇವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಂಗಳೂರು ಕ್ಷೇತ್ರ ದ ಉಪಾದ್ಯಕ್ಷ ಯಶವಂತ ಅಮೀನ್ ರವರು ಸರಳ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ , ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲ್ , ದ ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಜಯಶ್ರೀ ಕರ್ಕೆರ , ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ಪ್ರದಾನ ಕಾರ್ಯದರ್ಶಿ ಗಳಾದ ಹೇಮಂತ್ ಶೆಟ್ಟಿ , ನವೀನ ಪಾದಲ್ಪಾಡಿ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಬಂಟ್ವಾಳ ಎ ಪಿ ಎಂ ಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ , ಮತ್ತಿತರರು ಉಪಸ್ಥಿತರಿದ್ದರು. ಪುದು ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಗ ಸ್ವಾಗತಿಸಿ, ಪ್ರಸ್ತಾಪಿಸಿದರು , ಪ್ರವೀಣ್ ಶೆಟ್ಟಿ ಸುಜೀರ್ ನಿರೂಪಿಸಿದರು
