ಬಂಟ್ವಾಳ: ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ ಯ ವಿನೂತನ ಸಾರ್ವಜನಿಕ ಹಿತಾಸಕ್ತಿಯ ಕೊರೊನ ವಿರುದ್ಧದ ಕಾರ್ಯಕ್ರಮವಾದ ಆರೋಗ್ಯ ಹಸ್ತ ಯೋಜನೆಯ ಬಗ್ಗೆ ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಆಯ್ಕೆ ಯಾಗಿರುವ ಕೊರೊನ ವಾರಿಯರ್ಸ್‍ಗಳಿಗೆ ಆ.18ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮೆಲ್ಕಾರ್ ಬಿರ್ವಸೆಂಟರ್‍ನಲ್ಲಿ ತರಬೇತಿ ಕಾರ್ಯಗಾರ ನಡೆಯಲಿದೆ.614b8c03-84b6-412e-becf-1e37ceae339f

ಬ್ಲಾಕ್ ಕಾಂಗ್ರೇಸ್ ಸಮಿತಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋರೋನಾ ವಾರಿಯರ್ಸ್ಗಳು ಈ ತರಬೇತಿ ಕಾರ್ಯಗಾರದಲ್ಲಿ ಬಾಗವಹಿಸಲು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *