ಗುರುಪುರ : ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲು 20ನೇ ವಾರ್ಡಿನಲ್ಲಿ 10 ಕೋಟಿ ರೂ.ಗೂ ಮಿಕ್ಕ ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ವ್ಯವಸ್ಥೆಗೆ ಅಮೃತನಗರದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಆ. 17ರಂದು ಗುದ್ದಲಿ ಪೂಜೆ ನೆರವೇರಿಸಿದರು.ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದಂತೆ ಈ ವಾರ್ಡಿಗೆ ಒಳಚರಂಡಿ(ಯುಜಿಡಿ) ವ್ಯವಸ್ಥೆ ಲಭಿಸುತ್ತಿದೆ. ಇದು ಈ ಭಾಗದ ಜನರ ಬಹುದಿನಗಳ ಕನಸಾಗಿದ್ದು, ಸ್ಥಳೀಯರ ಸಹಕಾರದಿಂದ ಇದು ಅತಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.gur-aug-17-vamnjoor guddali pooje-3

ಅಧ್ಯಕ್ಷತೆ ವಹಿಸಿದ್ದ ಈ ಭಾಗದ ಕಾರ್ಪೊರೇಟರ್ ಹೇಮಲತಾ ರಘೂ ಸಾಲ್ಯಾನ್ ಮಾತನಾಡಿ, ಮನಪಾ ವ್ಯಾಪ್ತಿಯ ಈ ವಾರ್ಡಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ಯುಜಿಡಿ ಕಾಮಗಾರಿಗೆ ಸ್ಥಳೀಯರ ಪೂರ್ಣ ಸಹಕಾರ ಕೋರಿದರು.gur-aug-17-vamnjoor guddali pooje-1(Dr. bharath shetty)

gur-aug-17-vamnjoor atizen test-2ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಮೇಯರ್ ದಿವಾಕರ್, ಉಪ-ಮೇಯರ್ ವೇದಾವತಿ, ಹಿರಿಯ ಸರ್ವೇಯರ್ ಸಂಜೀವ ಎಚ್, ಕೆಯುಐಡಿಎಫ್‍ಸಿ ನಿರ್ದೇಶಕ ಮಂಜುನಾಥ್, ಹೇಮಲತಾ ಆರ್ ಸಾಲ್ಯಾನ್, ಸಿಪ್ಲೆಂಕ್ಸ್ ಪ್ರಾಜೆಕ್ಟ್ ಮ್ಯಾನೇಜರ್ ಅಠಾನುದಾಸ್, ಜಿಕೆಡಬ್ಲ್ಯೂ ಇಂಜಿನಿಯರ್ ಜಯಪ್ರಕಾಶ್, ಮನಪಾ ತೆರಿಗೆ ಮತ್ತು ಹಣಕಾಸು ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಮತ್ತಿತರರನ್ನು ಸ್ಥಳೀಯ ಪೌರ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.gur-aug-17-vamnjoor guddali pooje-1(hemalatha)

ಮನಪಾ ಯೋಜನಾ ಸಮಿತಿ ಅಧ್ಯಕ್ಷ ಶರತ್, ಹಿಂದೂ ಮುಖಂಡ ಜಗದೀಶ ಶೇಣವ, ಉದ್ಯಮಿ ರಘು ಸಾಲ್ಯಾನ್, ಪೌರ ಸಮಿತಿಯ ಪದಾಧಿಕಾರಿಗಳಾದ ಫ್ರಾನ್ಸಿಸ್ ಕುಟಿನ್ಹೋ, ವಿಠಲ ಸಾಲ್ಯಾನ್, ಸ್ಟ್ಯಾನಿ ಕುಟಿನ್ಹೋ, ಬಾಲಕೃಷ್ಣ ಎಂ ಹಾಗೂ ಲಕ್ಷ್ಮಣ್ ಶೆಟ್ಟಿಗಾರ, ಅನಿಲ್ ರೈ, ಸಂತೋಷ್ ಶೆಟ್ಟಿ, ಓಂಪ್ರಕಾಶ್ ಶೆಟ್ಟಿ ಹಾಗೂ ಪಕ್ಷ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *