ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಪಂ ಕಚೇರಿಯಲ್ಲಿ ರವಿವಾರ ರಾಷ್ಟ್ರಧ್ವಜ ತಲೆಕೆಳಗಾಗಿ  ರಾತ್ರಿಯವರೆಗೂ ಹಾರಡಿದ ಘಟನೆ ಬಯಲಿಗೆ ಬಂದಿದೆ.   ಈ ಬಗ್ಗೆ ಗಮನ ಹರಿಸಿದ ಸ್ಥಳೀಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪಂಚಾಯತ್ ಅವರಣದಲ್ಲಿ ಸ್ಥಳೀಯರು ಜಮಾಯಿಸುತ್ತಿದ್ದಂತೆ ಮಾಹಿತಿ ಪಡೆದ ಪಂಚಾಯತ್ ಸಿಬ್ಬಂದಿಯೋರ್ವರು ಅಗಮಿಸಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದಾರೆ ಎಂದು ತಿಳಿದು ಬಂದಿದೆ.IMG-20200816-WA0042

ಪಂಚಾಯತ್ ನ ಸಿಬ್ಬಂದಿಯೋರ್ವರಿಗೆ ಪ್ರತಿನಿತ್ಯ ರಾಷ್ಟ್ರಧ್ವಜ ಹಾರಿಸುವ ಜವಾಬ್ದಾರಿ ನೀಡಲಾಗಿದೆ.ಆದರೆ ನೀರು ಸರಬರಾಜು ಮಾಡುತ್ತಿರುವಾತ  ಈ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.ಆದರೆ ರವಿವಾರ ಮಾತ್ರ ಅತ ಧ್ವಜ ಮಾತ್ರ ಕೆಳಗಿಳಿಸದೆ ನೀರ್ಲಕ್ಷ್ಯಿಸಿದ್ದಾನೆ .ಉದ್ದೇಶ ಪೂರ್ವಕವಾಗಿ ಈತ ಈ ಕೃತ್ಯ ನಡೆಸಿದ್ದಾನೆಯೇ ಎಂಬುದು ಇನ್ನಷ್ಠೇ ತಿಳಿದುಬರಬೇಕಾಗಿದೆ.ಆದರೆ ಮಾಹಿತಿ ತಿಳಿದಿರುವ ಬಂಟ್ವಾಳ ಗ್ರಾಮಾಮಜತರ ಪೊಲೀಸರು ಮಾತ್ರ ಸ್ಥಳಕ್ಕೆ ಬರಲೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *