ಬಂಟ್ವಾಳ : ಪುದು ಗ್ರಾಮದ ಕಡೆಗೋಳಿ – ಪೊಳಲಿ ಸಂಪರ್ಕ ರಸ್ತೆಯ ನಡುಬೈಲು ಎಂಬಲ್ಲಿ ಬಹುದಿನದ ಬೇಡಿಕೆಯಾದ ನೂತನ ಬಸ್ ತಂಗುದಾಣ ಹಾಗೂ ಹಿಂದೂ ಜಾಗರಣಾ ವೇದಿಕೆ ಕಲಾಸಂಗಮ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. 
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಯವರು ಬಸ್ ತಂಗುದಾಣ ಹಾಗೂ ಹಿ.ಜಾ.ವೇ.ಯ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯುವಜನತೆಯ ಶಕ್ತಿ ವ್ಯರ್ಥವಾಗಬಾರದು ಅವರು ಸಂಸ್ಕಾರಯುತರಾಗಿ ಸಂಘಟಿತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಬೌದ್ಧಿಕ್ ಪ್ರಮುಖ್ ನರಸಿಂಹ ಮಾಣಿ , ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿರಾಜ್ ಬಿ. ಸಿ. ರೋಡ್ , ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೆತ್ತರಕೆರೆ , ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಂಜನಪದವು , ವಕೀಲರಾದ ರಾಜೇಶ್ ಬೊಳ್ಳುಕಲ್ಲು , ಕಿಶೋರ್ ಕುಮಾರ್ ಮಂಗಳೂರು , ಬಂಟ್ವಾಳ ತಾಲೂಕು ಪ್ರದಾನ ಕಾರ್ಯದರ್ಶಿ ಯೋಗೀಶ್ ಕುಮುಡೇಲು ,ತುಂಬೆ ವಲಯ ಪ್ರದಾನ ಕಾರ್ಯದರ್ಶಿ ಲೋಲಾಕ್ಷ , ನಡುಬೈಲು ಘಟಕದ ಅಧ್ಯಕ್ಷ ಸುರೇಶ ನಡುಬೈಲು , ಕಾರ್ಯದರ್ಶಿ ಲಿಖಿತ್ ಕುಮಾರ್ ಗೋವಿನತೋಟ ಮತ್ತಿತರರು ಉಪಸ್ಥಿತರಿದ್ದರು
