ಬಂಟ್ವಾಳ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿರುವ ಭೂ ಕುಸಿತ ದುರಂತದಲ್ಲಿ ಅರ್ಚಕರ ಜೊತೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ, ಸಹಾಯಕ ಅರ್ಚಕರ ಮೃತದೇಹ ಶನಿವಾರ ಪತ್ತೆಯಾಗಿದೆ.
ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ದೈವಸ್ಥಾನದ ಬಳಿ ರಾಮಕೃಷ್ಣ ರಾವ್ -ರೇಣುಕಾ ದಂಪತಿಯ ಪುತ್ರ ರವಿಕಿರಣ್ ರಾವ್ (24) ನಾಪತ್ತೆಯಾದವರರಾಗಿದ್ದು, ಶನಿವಾರ ಅವರ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿಂದ ಬಂದ ಮಾಹಿತಿಯನ್ವಯ ಅವರ ಹೆತ್ತವರ ಸಹಿತ ಸಂಬಂಧಿಕರು ಭಾಗಮಂಡಲಕ್ಕೆ ತಲುಪಿದ್ದಾರೆ. ಅಲ್ಲಿಯೇ ಮೃತದೇಹದ ಅಂತಿಮ ಸಂಸ್ಕಾರ ಕಾರ್ಯಗಳು ನಡೆಯಲಿದೆ ಎಂದು ತಿಳಿದುಬಂದಿದೆ.
ರಾಮಕೃಷ್ಣ ರಾವ್ ಅವರ ಅವಳಿ ಪುತ್ರರಲ್ಲಿ ಮೊದಲನೆಯವರಾದ ರವಿಕಿರಣ್ ರಾವ್ ಎರಡು ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ ಪ್ರದಾನ ಅರ್ಚಕರ ಜೊತೆ ಸಹಾಯಕ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು . ಮೇ ತಿಂಗಳಲ್ಲಿ ಮನೆಗೆ ಬಂದು ಹೋಗಿದ್ದರು. ಹತ್ತು ದಿನದ ಹಿಂದೆ ಪ್ರಾಕೃತಿಕ ವಿಕೋಪದಿಂದ ಬೂಕುಸಿತವುಂಟಾಗಿ ಐವರು ಅರ್ಚಕರು ನಾಪತ್ತೆಯಾಗಿದ್ದರು.ಇದರಲ್ಲಿ ಕಳ್ಳಿಗೆಯ ರವಿಕಿರಣ್ ಕೂಡ ಸೇರಿದ್ದರು.

