ಬಂಟ್ವಾಳ :  ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ   ಯೋಜನೆ, ಬಿ.ಸಿ.ಟ್ರಸ್ಟ್  ಬಂಟ್ವಾಳ ,ಜ್ಞಾನ ವಿಕಾಸ ಸೇವಾಪ್ರತಿನಿದಿಗಳ ೨೦೨೦-೨೦೨೧ ನೇ  ಸಾಲಿನ   ಜ್ಞಾನವಿಕಾಸ   ಕ್ರಿಯಾಯೋಜನೆ ಸಭೆಯು ಶುಕ್ರವಾರ ಬಂಟ್ವಾಳ ತಾಲೂಕು ಯೋಜನಾ  ಕಚೇರಿ   ಉನ್ನತಿ ಸೌಧದ ಸಭಾಂಗಣದಲ್ಲಿ  ನಡೆಯಿತು.ಯೋಜನೆಯ ದ. ಕ.ಜಿಲ್ಲಾ  ನಿರ್ದೇಶಕರಾದ ಸತೀಶ್ ಶೆಟ್ಟಿ ಯವರು  ಕಾರ‍್ಯಕ್ರಮವನ್ನು ಉದ್ಘಾಟಿಸಿದರು.2020-08-13 at 12.25.17

 ಜ್ಞಾನವಿಕಾಸ ಕೇಂದ್ರವು ಧರ್ಮಸ್ಥಳದ ಧರ್ಮಾ ಧಿಕಾರಿಯವರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ  ಹೇಮಾವತಿ ಅಮ್ಮನವರು ಮಹಿಳೆ ತನ್ನ ವ್ಯಕ್ತಿತ್ವ ಮತ್ತು ಶಿಸ್ತನ್ನು  ಹೇಗೆ ರೂಡಿಸಿಕೊಳ್ಳಬೇಕು,  ಪ್ರಪಂಚದ   ಕಣ್ಣಲ್ಲಿ   ತನ್ನನ್ನು ತಾನು ಹೇಗೆ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ  ಜ್ಞಾನವಿಕಾಸ ಕಾರ‍್ಯಕ್ರಮವನ್ನು   ಮಹಿಳೆಯರಿಗಾಗಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ಕಾರ‍್ಯಕ್ರಮವನ್ನು ಕೇಂದ್ರ ಮಟ್ಟದಲ್ಲಿ  ಅನುಷ್ಠಾನ  ಮಾಡುವಲ್ಲಿ ಸದಸ್ಯರನ್ನು ಕ್ರಿಯಾತ್ಮಕ ಚಟುವಟಿಕೆಯ ಮೂಲಕ  ತೊಡಗಿಸಿಕೊಳ್ಳುವುದು,  ಗ್ರಾಮ ಮಟ್ಟದಲ್ಲಿ    ಸದಸ್ಯರಿಗೆ ಸರಕಾರದ ಸೌಲಭ್ಯಗಳ ಬಗ್ಗೆ  ಮಾಹಿತಿ ನೀಡುವುದರ ಜತೆಗೆ  ಅದನ್ನು ಪಡೆದುಕೊಳ್ಳುವಲ್ಲು ಸದಸ್ಯರಿಗೆ ಸ್ಪಂದನೆ ನೀಡುವಂತೆ ತಿಳಿಸಿದರು.

  ಯೋಜನೆಯ ತಾಲೂಕು ಯೋಜನಾಧಿಕಾರಿ     ಜಯಾನಂದ ಪಿ,  ತಾಲ್ಲೂಕಿನಲ್ಲಿರುವ ೨೫ ಜ್ಞಾನವಿಕಾಸ ಕೇಂದ್ರಗಳ ಸ್ಥಿತಿ ಗತಿಗಳ ಕುರಿತಂತೆ ವಿವರಿಸಿದರಲ್ಲದೆ    ಪ್ರತಿ ಕೇಂದ್ರದಲ್ಲು  ಪ್ರತಿ ತಿಂಗಳು ಉತ್ತಮವಾದ  ಕಾರ‍್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಸೇವಾಪ್ರತಿನಿಧಿಗಳ ಪೂರ್ವತಯಾರಿ ಹಾಗೂ ಸಂಪನ್ಮೂಲ ವ್ಯಕ್ತಿಗಳ  ಆಯ್ಕೆಗೊಳಿಸುವ ಕುರಿತಾಗಿ  ಮಾಹಿತಿ ನೀಡಿದರು.  ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ  ತಾಂತ್ರಿಕ  ಪ್ರಬಂಧಕಿಯಾದ  ರಾಧಿಕಾ ಇವರು ೨೦೨೦-೨೧ ನೇ ಸಾಲಿನ ಜ್ಞಾನವಿಕಾಸ ಕೇಂದ್ರಗಳಲ್ಲಿ ಪ್ರತಿ ತಿಂಗಳು  ಕಾರ‍್ಯಕ್ರಮಗಳನ್ನು ಅನುಷ್ಠಾನ ಮಾಡುವ ಬಗ್ಗೆ ಹಾಗೂ ಕೇಂದ್ರಗಳಲ್ಲಿ ಇದನ್ನು ಪೂರ್ವತಯಾರಿಯೊಂದಿಗೆ ಹೇಗೆ ನಡೆಸಬೇಕೆಂಬುದರ ಬಗ್ಗೆ ಮಾಹಿತಿಯಿತ್ತರು. ತಾಲೂಕಿನ  ಲೆಕ್ಕ ಪರಿಶೋಧಕಿ  ಶೀಲಾವತಿ  ಜ್ಞಾನ ವಿಕಾಸ ಕೇಂದ್ರಗಳಲ್ಲಿ ನಿರ್ವಹಿಸಬೇಕಾದ ದಾಖಲಾತಿಗಳು, ಕೇಂದ್ರದ ಗ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದರು.  ಸೇವಾಪ್ರತಿನಿದಿಗಳಾದ  ಶಕೀಲಾ ಸ್ವಾಗತಿಸಿದರು.  ಬೇಬಿ  ಕಾರ‍್ಯಕ್ರಮವನ್ನು ನಿರೂಪಿಸಿ,ಆಶಾ ವಂದಿಸಿದರು.

By suddi9

Leave a Reply

Your email address will not be published. Required fields are marked *