ಬಡಗಬೆಳ್ಳೂರು: ವಿಶ್ವಹಿಂದೂ ಪರಿಷತ್ ಭಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸತ್ಸಂಗ ಕಾರ್ಯಕ್ರಮ ಪ್ರಮುಖ್ ತೇಜಾಕ್ಷ ಬೆಳ್ಳೂರು ಹಾಗೂ ಸಂದೇಶ್ ಧನುಪೂಜೆ ಇವರ ನೇತ್ಯತ್ವದಲ್ಲಿ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಖೆಯ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಹರೀಶ್ ಕೇಪುಲಡ್ಕ ಸಂಚಾಲಕ ಸಮೀತ್ ಧನುಪೂಜೆ ,ಪದಾದಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಾಖೆಯ ಸಂಚಾಲಕ ಸುಮಿತ್ ಧನುಪೂಜೆ ಬೌದ್ದಿಕ್ ನೀಡಿದರು.ಭಾರತ ಮಾತೆ ಮತ್ತು ಶ್ರೀಕೖಷ್ಣ ದೇವರಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು. ಸೇರಿದ ಕಾರ್ಯಕರ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
