ಕುಪ್ಪೆಪದವು: ಸತತವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ನ ಕಿಲೆಂಜಾರು ಗುರ್ಕಾರಗುಡ್ಡೆ ಸೈಟ್ ಕುಸಿಯುವ ಭೀತಿ ಎದುರಾಗಿದ್ದು ಸುಮಾರು ಆರು ಮನೆಗಳಿಗೆ ಅಪಾಯ ಎದುರಾಗಿದೆ. ಶಾರದಾ ಎಂಬವರ ಮನೆಯ ಅಂಚಿನವರೆಗೂ ಮಣ್ಣು ಕುಸಿದಿದ್ದು ಇಲ್ಲಿ ಇನ್ನು ಸ್ವಲ್ಪವೇ ಮಣ್ಣು ಕುಸಿತವಾದರೂ ಇಡೀ ಮನೆ ಸುಮಾರು ನಮೂವತ್ತಕ್ಕೂ ಹೆಚ್ಚು ಆಳಕ್ಕೆ ಕುಸಿಯುವ ಭೀತಿ ಎದುರಾಗಿದೆ.20200810_180928

ಅಲ್ಲದೆ ಇಲ್ಲಿ ಇನ್ನೂ ಸುಮಾರು ಐದು ಮನೆಗಳು ಕುಸಿಯುವ ಅಪಾಯದಲ್ಲಿದ್ದು, ಗುರುಪುರ ಮಠದ ಗುಡ್ಡೆಯಲ್ಲಿ ಕುಸಿತವಾದ ನಂತರ ಪಂಚಾಯತ್ ಇಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟೀಸು ನೀಡಿತ್ತು. ಪಂಚಾಯತ್ ಆಡಳಿತಾಧಿಕಾರಿ, ಜಿಪಂ. ಯೋಜನಾ ನಿರ್ದೇಶಕ ಮಧುಕುಮಾರ, ಪಿಡಿಓ ಸವಿತಾ ಮಂದೋಲಿಕರ್, ಕಾರ್ಯದರ್ಶಿ ಇಸ್ಮಾಯಿಲ್, ಗ್ರಾಮಕರಣಿಕ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಅಪಾಯದಲ್ಲಿರುವ ಮನೆಗಳ ನಿವಾಸಿಗಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಥವಾ ಪಂಚಾಯತ್ ಸೂಚಿಸುವ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ.20200810_180955

ಆದರೆ ಹೆಚ್ಚುವರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ, ಪಂಚಾಯತ್ ನ ಕಾಳಜಿ ಕೇಂದ್ರ ಅವ್ಯವಸ್ಥೆಯಿಂದ ಕೂಡಿರಬಹುದೆಂಬ ಅನುಮಾನ ಕೂಡ ಹೆಚ್ಚಿನವರು ಮನೆ ಖಾಲಿ ಮಾಡಲು ಹಿಂದೆಮುಂದೆ ನೋಡಲು ಕಾರಣವಾಗಿದೆ.ಆದರೆ ಮಳೆ ಇದೆ ರೀತಿ ಮುಂದುವರಿದರೆ ಕೆಲವು ಮನೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಂತೂ ಖಂಡಿತ.ಅಪಾಯವರಿತು ನಿವಾಸಿಗಳು ಇಲ್ಲಿಂದ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರವಾಗುವುದು ಅನಿವಾರ್ಯವಾಗಿದೆ ಹಾಗು ಆಡಳಿತ ಇವರಿಗೆ ಸಮರ್ಪಕ ಕಾಳಜಿ ಕೇಂದ್ರ ತೆರೆದು ಜನರನ್ನು ಸ್ಥಳಾಂತರಿಸಿ  ಮಠದ ಗುಡ್ಡೆ ಯಂತಹ ದುರಂತ ನಡೆಯದಂತೆ ನೋಡಿಕೊಳ್ಳಬೇಕಾಗಿದೆ.

By Suddi9

Leave a Reply

Your email address will not be published. Required fields are marked *