ಗುರುಪುರ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ಪ್ರಯುಕ್ತ ಆ. 5ರಂದು ನೀರುಮಾರ್ಗ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಮಲ್ಲೂರು ಶಕ್ತಿ ಕೇಂದ್ರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರ ಮಂಡಲ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಲಕ್ಷ್ಮಣ್ ಶೆಟ್ಟಿಗಾರ್ ಉಪಸ್ಥಿತಿಯಲ್ಲಿ ಸಾಮೂಹಿಕ ಪೂಜೆ ನಡೆಯಿತು.
ಭೂಮಿಪೂಜೆ ನಿಮಿತ್ತ ದೇವಸ್ಥಾನದ ವಠಾರದಲ್ಲಿ ಸಸಿ ನೆಡಲಾಯಿತು. ರಾಮ ಜನ್ಮಭೂಮಿಯಲ್ಲಿ ನಡೆದಿದ್ದ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ಶೆಟ್ಟಿ ಅಡ್ಯಾರ್, ರವೀಂದ್ರ ಶೆಟ್ಟಿಗಾರ, ಮಹಾಬಲ ಅಡ್ಯಾರ್ ಇವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ, ಮಂಡಲ ಹಾಗೂ ಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಗೋಕುಲದಾಸ್ ಶೆಟ್ಟಿ, ಸೋಹನ್ ಮಲ್ಲೂರು, ಯಶ್ವಿನ್ ಎನ್ ಕುಂದರ್, ಸಂಜೀವ ಮಜಲ್, ನಾಗೇಶ್ ಬಾಗಲಕೋಟೆ, ಪ್ರಸನ್ನ ಕುಮಾರ್ ನೀರುಮಾರ್ಗ, ಉಳಾಯಿಬೆಟ್ಟು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸೌಮ್ಯ ಪಂಡಿತ್, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಮಲ್ಲೂರು, ರಘುರಾಮ ಪೂಜಾರಿ, ಹಿರಿಯ ಕಾರ್ಯಕರ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ-ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
