ಬಂಟ್ವಾಳ: ಕೋರನಾ ಮಹಾಮಾರಿಯ ಸಂಕಷ್ಟ ಕಾಲದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಾಡುತಿದ್ದಾಗ ರಕ್ತದಾನ ಶಿಬಿರದ ಮೂಲಕ ರಕ್ತದ ಕೊರತೆಯನ್ನು ನೀಗಿಸುವ ಕೆಲಸ ಮಾಡುತ್ತಿರುವ ಬಜರಂಗ ಕಾರ್ಯಕರ್ತರ ಕಾಳಜಿ ಶ್ಲಾಘನೀಯ ಎಂದು ವಿಶ್ವ ಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ , ಭಜರಂಗದಳ ಬಂಟ್ವಾಳ ಪ್ರಖಂಡ ದ ಆಶ್ರಯದಲ್ಲಿ ಪೊಳಲಿ ‘ಯಲ್ಲಿಪುರಲ್ದ ಅಪ್ಪೆನ ಜೋಕುಲು’ ಎಂಬ ಹೆಸರಿನ ವಿಶ್ವಹಿಂದೂ ಪರಿಷತ್, ಭಜರಂಗದಳ ಶಾಖೆ ಹಾಗೂ. ಕೆ.ಎಂ.ಸಿ ಆಸ್ಪತ್ರೆ ಹಾಗೂ ವೆನ್ ಲಾಕ್ ಆಸ್ಪತ್ರೆಯ ಸಹಯೋಗ ದಲ್ಲಿ ನಡೆದ ರಕ್ತದಾನ ಶಿಬಿರ ವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ನೂತನ ಶಾಖೆಯ ಪದಾಧಿಕಾರಿಗಳ ಘೋಷಿಸಲಾಯಿತು . ಇದೇ ವೇಳೆ ರಕ್ಷಾ ಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು. ಭಜರಂಗ ದಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ , ಪ್ರಾಂತ ಸಹ ಸಂಚಾಲಕ ಭುಜಂಗ ಕುಲಾಲ್ , ವಿಭಾಗ ಸಂಚಾಲಕ ಅಶೋಕ್ ಶೆಟ್ಟಿ ಸರಪಾಡಿ , ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ಬಿ ಪದ್ಮನಾಭ , ಕಾರ್ಯದರ್ಶಿ ಸುರೇಶ ಬೆಂಜನ ಪದವು , ಬಜರಂಗ ದಳ ತಾಲೂಕು ಸಂಚಾಲಕ ಶಿವ ಪ್ರಸಾದ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋರನಾ ವಾರಿಯರ್ಸ್ ಗಳಾಗಿ ದುಡಿದ ಆಶಾ ಕಾರ್ಯಕರ್ತರು , ಪೌರ ಕಾರ್ಮಿಕರನ್ನು , ರಕ್ತದಾನ ಶಿಬಿರ ದಲ್ಲಿ ಕರ್ತವ್ಯ ನಿರತ ಕೆ ಎಂ ಸಿ ಆಸ್ಪತ್ರೆ ಮತ್ತು ವೆನ್ ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ದವರನ್ನು ಗೌರವಿಸಲಾಯಿತು. ಶಿಬಿರದಲ್ಲಿ 263 ಯೂನಿಟ್ ನಷ್ಟು ರಕ್ತವನ್ನು ಸಂಗ್ರಹಿಸಲಾಯಿತು
