ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀಅನ್ನಪೂರ್ಣೇಶ್ವರೀ ದೇವಸ್ಥಾನದ ಪರಿಚಾರಕ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಿ.ಸಿ.ರೋಡಿಗೆ ಸಮೀಪದ ಅಲೆತ್ತೂರು ನಿವಾಸಿ ಮಹಾಬಲ(59) ಎಂಬವರ ಮೃತಪಟ್ಟವರಾಗಿದ್ದಾರೆ.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಪರಿಚಾರಕರಾಗಿರುವ ಅವರು,ಗುರುವಾರ ಬೆಳಿಗ್ಗೆ ದೇವಸ್ಥಾನದ ಶುಚಿಕಾರ್ಯ ಮುಗಿಸಿದ ಬಳಿಕ ಅವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು.ಮನೆಮಂದಿ ಹುಡುಕಾಡಿದಾಗ ಶುಕ್ರವಾರ ದೇವಸ್ಥಾನದ ದ್ವಾರದ ಬಳಿರುವ ಸರಕಾರಿ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.ಬಾವಿಯ ಪಂಪ್ ದುರಸ್ಥಿಗೆಂದು ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
