ನಿಯತ್ತಿಗೆ ನಾಯಿ ಪ್ರತೀಕ ಎಂಬ ಮಾತೊಂದಿದೆ. ಇಲ್ಲಿ ಒದಗಿಸಲಾದ ವೀಡಿಯೋ ತುಣುಕೊಂದು ಈ ಮಾತಿಗೆ ಸಾಕ್ಷಿಯಂತಿದೆ. ಕಾರಣಾಂತರದಿಂದ ನಾಯಿ ಮರಿಗಳೆರಡು ಸಾವನ್ನಪ್ಪಿದ್ದವು. ಮನೆ ಮಾಲಕರು ಆ ಮರಿ ನಾಯಿಗಳಿಗೆ ಗೌರವಯುತ ಅಂತ್ಯಕ್ರಿಯೆ ನಡೆಸುತ್ತಾರೆ.
ಅಂತ್ಯಕ್ರಿಯೆ ನಡೆಯುವಲ್ಲಿಗೆ ಮನೆ ಮಂದಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಮರಿಗಳ ತಾಯಿ ಮರಿಗಳನ್ನಿಡಲಾದ ಹೊಂಡಕ್ಕೆ ತಾಯಿ ನಾಯಿ ಮುಖವನ್ನೇ ಅಸ್ತ್ರವನ್ನಾಗಿಸಿ ಮಣ್ಣು ಹಾಕುತ್ತಿದೆ. ಮರಿಗಳ ಅಂತ್ಯಕ್ರಿಯೆ ನಡೆಯುವಲ್ಲಿ ತಾಯಿ ನಾಯಿ ತನ್ನಿಂದಾದ ಪ್ರಯತ್ನ ಮಾಡುತ್ತಿರುವ ದೃಶ್ಯ ಯಾವುದೇ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಅಂದ ಹಾಗೇ ಈ ದೃಶ್ಯ ಹಲವು ದಿನಗಳಿಂದ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ದೃಶ್ಯವನ್ನು ನೋಡಿಯಾದರೂ ಮನುಷ್ಯ ಜನಾಂಗದವರು ಅರ್ಥಮಾಡಿಕೊಳ್ಳಬೇಕಾಗಿದೆ.
ಪ್ರಾಣಿ ಇರಲಿ, ಮನುಷ್ಯರಿರಲಿ ತಾಯಿ ಯಾವತ್ತಿದ್ದರೂ ತಾಯಿಯೇ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದ್ದು, ಸಮಗ್ರ ಸನ್ನಿವೇಶ ಮನುಷ್ಯನಲ್ಲಿ ಮಾನವೀಯತೆ ಜಾಗ್ರತಗೊಳಿಸುವಂತಿದೆ ಅಲ್ಲವೇ ?
