ಬಂಟ್ವಾಳ: ಬಿ.ಸಿ.ರೋಡಿನ ಬಿಜೆಪಿ ಕಾರ್ಯಕರ್ತರು ಬಿ.ಸಿ.ರೋಡಿನ ಪ್ರಮುಖ ಜಾಗಗಳಲ್ಲಿ ಇದ್ದ ರಸ್ತೆ ಹೊಂಡಗಳನ್ನು ಮುಚ್ಚುವ ಮೂಲಕ ರವಿವಾರದ ಲಾಕ್ ಡೌನ್ಸ ದುಪಯೋಗಪಡಿಸಿದರು. ಬಿ.ಸಿ.ರೋಡಿನ ಹೆದ್ದಾರಿ, ಸರ್ವೀಸ್ ರಸ್ತೆಗಳಲ್ಲಿ ರಸ್ತೆ ಹದಗೆಟ್ಟಿದ್ದು, ಸುಗಮ ವಾಹನ ಸಂಚಾರಕ್ಕೆ ಅಡೆಚಣೆಯುಂಟಾಗುತ್ತಿತ್ತು.
ಅದರಲ್ಲೂ ಬಿ.ಸಿ.ರೋಡಿನ ರಾಜಾ ರಸ್ತೆಯಲ್ಲಿ ಹೊಂಡ ಇರುವ ಜಾಗದಲ್ಲಿ ಬ್ಯಾರಿಕೇಟ್ ಹಾಕಲಾಗಿತ್ತು. ಕೆಲವು ದಿನಗಳ ಹಿಂದೆ ಒಂದೆರಡು ಬೈಕ್ ಸವಾರರು ಈ ಹೊಂಡದಲ್ಲಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಹೊಂಡ ಮುಚ್ಚಲು ಹೊರಟ ಬಿಜೆಪಿ ಕಾರ್ಯಕರ್ತರು, ಹೊಂಡಗಳನ್ನು ಕಲ್ಲಿನಿಂದ ಮುಚ್ಚಿ, ಅದರ ಮೇಲೆ ಕಾಂಕ್ರೀಟ್ ಹಾಕಿದರು.
ನೆಲಕ್ಕೆ ಕಲ್ಲು ಹಾಸಿ ಕಾಂಕ್ರೀಟ್ ಹಾಕಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿಯಾದರೂ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದರು. ಈ ವೇಳೆ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಪ್ರದೀಪ್ ಅಜ್ಜಿಬೆಟ್ಟು, ಪ್ರಣಾಮ್ ಅಜ್ಜಿಬೆಟ್ಟು, ಲಕ್ಷಣ್ ರಾಜ್, ಪ್ರದೀಪ್ ಪುಟ್ಟ ಬಿ.ಸಿ.ರೋಡ್, ಶೈಲೇಶ್ ಬಿ.ಸಿ.ರೋಡ್, ಅಶ್ವಿತ್ ಅಜ್ಜಿಬೆಟ್ಟು, ಶಶಿಧರ ಕೈಕುಂಜ ಮೊದಲಾದವರು ಉಪಸ್ಥಿತರಿದ್ದರು.
