ರಾಯಲ್ಪಾಡು : ದೇಶದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿ ಕರ್ನಾಟಕ ರಾಜ್ಯ ಪ್ರೌಡಶಿಕ್ಷಣ ಇಲಾಖೆ ಮಾದರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಜಿಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೀಕ್ಷರಾದ ಎಸ್.ರಘುನಾಥರೆಡ್ಡಿ ಸಂತಸ ವ್ಯಕ್ತಪಡಿಸಿದರು.ಲಕ್ಷ್ಮೀಪುರ ಪರೀಕ್ಷಾ ಕೇಂದ್ರಕ್ಕೆ ಶುಕ್ರವಾರ ಬೇಟಿ ನೀಡಿ ಮಾತನಾಡಿದರು.
ಕರೋನಾ ಮಧ್ಯೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅತ್ಯತ್ತಮವಾಗಿ ನಡೆಯಲು ಸಹಕರಿಸಿದ ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್‍ಇಲಾಖೆ ಸಿಬ್ಬಂದಿಗಳ ಸೇವೆಗೆ , ತಾಲೂಕಿನ 13 ಪರೀಕ್ಷೆ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಉತ್ತಮವಾಗಿ ವ್ಯವಸ್ಥೆ ಮಾಡಿರುವ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಹಾಗೂ ಕರೋನಾ ರೋಗ ಭೀತಿಯನ್ನು ಹೋಗಲಾಡಿಸಿ , ವಿದ್ಯಾರ್ಥಿಗಳನ್ನು ಪರೀಕ್ಷೆಯನ್ನು ಬರೆಯಲು ಹುರುದುಂಬಿಸಿ ಯಶಸ್ವಿಯಾಗಿ ಪರೀಕ್ಷೆಯನ್ನು ಬರೆಸಲು ಸಹಕರಿಸಿದ ಪೋಷಕರ ಪ್ರಶಂಸೆ ವ್ಯಕ್ತಪಡಿಸಿದರು.
ಬಿಎಒ ಉಮಾದೇವಿ,ಲಕ್ಷ್ಮೀಪುರ ಪರೀಕ್ಷ ಕೇಂದ್ರದ ಮುಖ್ಯ ಅಧೀಕ್ಷ ಶ್ರೀನಿವಾಸಪ್ಪ, ಪ್ರಶ್ನಪತ್ರಿಕೆ ಅಧೀಕ್ಷಕ ಎಂ.ಕೆ.ವೆಂಕಟರಮಣ, ಪರೀಕ್ಷಾ ಜಾಗೃತಿ ಧಳ ಸಿಬ್ಬಂದಿ ನಾರಾಯಣಸ್ವಾಮಿ, ರಾಮಲಕ್ಷ್ಮಮ್ಮ, ಬೈರೇಗೌಡ ಇದ್ದರು.
