ಉಡುಪಿ: ಕನಾ೯ಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಜಲೈ – 3 ರಂದು ವೈದ್ಯರ ದಿನಾಚರಣೆ ಕಾಯ೯ಕ್ರಮ ಆದಶ್೯ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಿತು.

ಈ ಸಂದಭ೯ದಲ್ಲಿ ಹಿರಿಯ ವೈದೈ ಕಳೆದ 50 ವಷ೯ಗಳ ಕಾಲ ವೈದ್ಯಕೀಯ ಸೇವೆ ನೀಡಿದ ಡಾ|ಛಾಯಾ ಹೆಬ್ಬಾರ್ ರವರನ್ನು ಗೌರವಿಸಲಾಯಿತು.ಅವರು ವೈದ್ಯಕೀಯ ರಂಗದ ಅಂದು ಇಂದಿನ ಬದಲಾವಣೆ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಐ.ಎಂ.ಎ ಅಧ್ಯಕ್ಷೆ ಡಾI ಶ್ರೀದೇವಿ ಕಟ್ಟೆ ವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾI ಆದಶ್೯ ಹೆಬ್ಬಾರ್, ಜಯ೦ಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್’ ಕಾಯ೯ದಶಿ೯ ಪ್ರಸನ್ನ ಕಾರಂತ್, ಜಯ೦ಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮುಂತಾದವರಿದ್ದರು.ಮಂಜುನಾಥ್ ಕಾರಂತ್ ಪ್ರಾಥಿ೯ಸಿದರು, ಅನಂತ ಕೃಷ್ಣ ಹೊಳ್ಳ ಪರಿಚಯಿಸಿದರು.ಪ್ರಕಾಶ್ ಆಚಾರ್ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
