ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೆರವಿನಿಂದ ಬಂಟ್ವಾಳ ತಾಲೂಕಿನ ಸುಮಾರು 85 ಯಕ್ಷಗಾನ ಕಲಾವಿದರಿಗೆ ಕೊಡಲ್ಪಟ್ಟ ಪಡಿತರ ಕಿಟ್ ನ್ನು ಬಿ.ಸಿ.ರೋಡಿನ ರೋಡ್ ರಂಗೋಲಿ ಹೋಟೆಲ್ ನ ಸಭಾಂಗಣದಲ್ಲಿ ವಿತರಿಸಲಾಯಿತು. ನಡೆದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಬಾ. ಜ. ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ವಹಿಸಿದ್ದರು.

ಹೊಟೇಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿ , ದಂತ ವೈದ್ಯ ಬಾಲಚಂದ್ರ ಶೆಟ್ಟಿ ಮೀಯಾರು ಅವರು ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಸ್ತಾವಿಸಿ ಕಲಾವಿದರಿಗೆ ಪಡಿತರ ಕಿಟ್ ಒದಗಿಸುವಲ್ಲಿ ಸಹಕರಿಸಿದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
