ಬಂಟ್ವಾಳ: ಅನಂತಾಡಿ ಗ್ರಾಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರ 2.34 ಕೋ.ರೂ.ಗಳ ಅನುದಾನದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

9 kobila

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು. 1.50 ಕೋ.ರೂ.ಗಳ ಕೊಂಬಿಲ-ಅನಂತಾಡಿ ರಸ್ತೆ ಡಾಮಾರೀಕರಣ ಕಾಮಗಾರಿ ಉದ್ಘಾಟನೆ, ಬೊಗ್ಗಂಡ-ಪಿಲಿಚಂಡಿಗುಡ್ಡೆ ರಸ್ತೆ 20 ಲಕ್ಷ ರೂ, ಹಿರ್ತಂದಬೈಲು-ಸಂಕೇಶ ರಸ್ತೆ 30 ಲಕ್ಷ ರೂ, ಸಿರ್ತಂಡಬಲು-ನಡುಮನೆ ರಸ್ತೆ 5 ಲಕ್ಷ ರೂ, ಕೂಡುರಸ್ತೆ-ವಡ್ತೇಲುರಸ್ತೆ 10 ಲಕ್ಷ ರೂ, ಗೋಳಿಕಟ್ಟೆ-ಕರಿಂಕ ರಸ್ತೆ 10 ಲಕ್ಷ ರೂ, ಕೊಂಬಿಲ ಕಾಲೊನಿ ರಸ್ತೆ 6 ಲಕ್ಷ ರೂ, ಅವೆತ್ತಿಕಲ್ಲು-ಪುಂಜಾವು ರಸ್ತೆ 3 ಲಕ್ಷ ರೂ.ಅನುದಾನ ಒದಗಿಸಲಾಗಿದೆ.

1 2 ananthady

ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಸನತ್‍ಕುಮಾರ್ ರೈ ಟಿ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ವಸಂತಿ, ಸುಮಿತ್ರಾ, ಪ್ರಮುಖರಾದ ಜಯರಾಮ ಆಚಾರ್ಯ, ಗಣೇಶ್ ಪೂಜಾರಿ ಬಂಟ್ರಿಂಜ, ನಾಗೇಶ್ ಭಂಡಾರಿ ಕರಿಂಕ, ತಿಮ್ಮಪ್ಪ ಗೌಡ ಅಶ್ವತ್ಥಡಿ, ಕಿರಣ್ ಗೋಳಿಕಟ್ಟೆ, ಹೇಮಂತ್ ಗೌಡ, ಕುಂಞಣ್ಣ ಗೌಡ, ಉಮೇಶ್ ನೆಡ್ಯಾರ, ಚಂದ್ರಶೇಖರ್ ಕರ್ಕೇರ, ರಾಮ್‍ಪ್ರಸಾದ್ ಕೊಂಬಿಲ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *