ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ಹಿಂದೂ ರುದ್ರ ಭೂಮಿ (ದೇವಭೂಮಿ)ಗೆ ಇತ್ತೀಚೆಗೆ ನಾಲ್ವರು ಯುವಕರು ಅಕ್ರಮವಾಗಿ ಪ್ರವೇಶಿಸಿ  ಶ್ರೀ ಶಿವ ದೇವರ ಮಹಾ ಮೂರ್ತಿಯ ಪೀಠದ ಮೇಲೆ ಚಪ್ಪಲಿ ಹಾಕಿ ಕುಪ್ಪಳಿಸಿ ಅಪವಿತ್ರ ಗೊಳಿಸಿರುವ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಜೀಪ ವಲಯದ ವತಿಯಿಂದ ದೇವಭೂಮಿಯನ್ನು ಶುದ್ದೀಕರಣಗೊಳಿಸಲಾಯಿತು.IMG-20200623-WA0004

ಶ್ರೀ ಕ್ಷೇತ್ರ ಅನ್ನಪ್ಪಾಡಿ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥಿನೆಗೈದ ಬಳಿಕ ಶೀ ಕ್ಷೇತ್ರದಿಂದಲೇ ವಿಧಿ ವಿಧಾನಗಳೊಂದಿಗೆ ಕಲಶ ಗಂಗಾಜಲ ತಂದು  ದೇವಭೂಮಿಯನ್ನು ಶುದ್ಧೀಕರಣ ಗೊಳಿಸಲಾಯಿತು. ಸಜೀಪ ಮಾಗಣೆಯ ತಂತ್ರಿಗಳಾದ  ಸುಬ್ರಹ್ಮಣ್ಯ ಭಟ್ ಇವರು ಶ್ರೀ ಶಿವನ ಮಹಾ ಮೂರ್ತಿಗೆ ಗಂಗಾಜಲ ಕಲಶಾಭಿಷೇಕ ಮಾಡುವ ಮೂಲಕ ಶುದ್ಧೀಕರಣ ಕಾರ್ಯವನ್ನು ನೆರವೇರಿಸಿದರು.IMG-20200623-WA0000

ಹಿಂದೂ ರುದ್ರ ಭೂಮಿಯ ಅಧ್ಯಕ್ಷ ಯಶವಂತ ದೇರಾಜೆ,ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು,  ಸಹ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸಜೀಪ, ಸಜೀಪ ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮನೋಹರ್ ಕರ್ಕೆರ, ಸಜೀಪ ವಲಯ ಭಜರಂಗದಳ ಸಂಚಾಲಕ ಶರತ್ ಸಜೀಪ, ದೇವಭೂಮಿ ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್ ಪೂಜಾರಿ ಶಾರ್ತಾವು,  ರಮೇಶ್ ರಾವ್ ಪತ್ತುಮುಡಿ, ಭಾಸ್ಕರ ಕಂಪದಕೋಡಿ, ರುದ್ರ ಭೂಮಿಯ ನಿರ್ವಾಹಕರಾದ ಭಾಸ್ಕರ ಬೆಳ್ಚಾಡ ಕಂಚಿನಡ್ಕ ಪದವು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *