ಬಂಟ್ವಾಳ: ಬೆಂಕಿ ತಗಲಿ ಸುಟ್ಟ ಗಾಯಗೊಂಡಿದ್ದ ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಮಹಿಳೆ ಹರಿಣಾಕ್ಷಿ(೩೫) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಅವರು ಜೂ . ೨ರಂದು ಮನೆಯಲ್ಲಿ ಗ್ಯಾಸ್ ಖಾಲಿಯಾದ ಕಾರಣ ಒಲೆಯಲ್ಲಿ ತಿಂಡಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರು ಧರಿಸಿದ್ದ ನೈಟಿಗೆ ಬೆಂಕಿ ಹಿಡಿದಿದೆ. ಇದರಿಂದ ಗಾಯಗೊಂಡಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಜೂನ್ ೧೭ರಂದು ಮತ್ತೆ ಗಾಯ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
