ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಭಾರತೀಯ ಸೇನೆಯಲ್ಲಿದ್ದ ಯೋಧ ಸಂದೇಶ್ ಶೆಟ್ಟಿ (35)ಹೃದಯಘಾತದಿಂದ ಉತ್ತರ ಪ್ರದೇಶದ ಮಥುರದಲ್ಲಿ ನಿಧನರಾಗಿದ್ದಾರೆ. ಮೃತರು ಬಾರ್ಯ ನಾರಾಯಣ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ಅವರ ಪುತ್ರ ಸಂದೆಶ್ ಶೆಟ್ಟಿ ಕೆಲವು ತಿಂಗಳ ಹಿಂದೆ ಊರಿಗೆ ಬಂದಿದ್ದರು.
ಆದರೆ ಲಾಕ್ ಡೌನ್ ಇದ್ದ ಕಾರಣ ಮೂರುತಿಂಗಳಿನಿಂದ ಮನೆಯಲ್ಲೆ ಇದ್ದು ಇತ್ತೀಚೆಗೆ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಮಥುರಗೆ ಹೋಗಿ ಕ್ವಾರೆಂಟ್ ನ್ ಕೇಂದ್ರದಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಶುಕ್ರವಾರ ಅವರು ತೀವೃ ಹ್ರದಯಘಾತಕ್ಕೆ ಒಳಗಾಗಿದ್ದರು ಕೂಡಲೇ ಅವರನ್ನು ಚಿಕಿತ್ಸೆಗೆ ಒಳಪಡಿಸಿದರು ಚಿಕಿತ್ಸೆ ಫಲಿಸದೆ ನಿಧನರಾದರೆಂದು ತಿಳಿದು ಬಂದಿದೆ.
