ಬಂಟ್ವಾಳ: ಬಿಜೆಪಿ ಮಂಗಳೂರು ವಿಭಾಗದ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಖರ ಸಭೆಯು ಬಂಟವಾಳ ಬಂಟರ ಭವನದಲ್ಲಿ ಗುರುವಾರ ನಡೆಯಿತು. 
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರ ಸಭೆಯ ಅಧ್ಯಕ್ಷತೆ ವಹಿಸಿದ್ದು, ಪಕ್ಷ ಸಂಘಟನೆ ಸಹಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯತು. ಈ ಸಭೆಯಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಜೀ,ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ , ಮೂರು ಜಿಲ್ಲೆಯ ಬಿಜೆಪಿ ಶಾಸಕರುಗಳು ,ವಿಭಾಗದ ಪ್ರಮುಖರು, ಜಿಲ್ಲಾ ಅಧ್ಯಕ್ಷರುಗಳು , ಮಂಡಲ ಅಧ್ಯಕ್ಷರುಗಳು ಹಾಗೂ ಪ್ರಮುಖರುಗಳು ಭಾಗವಹಿಸಿದ್ದರು.
