ಬಂಟ್ವಾಳ:  ಜೂನ್ ತಿಂಗಳ ಆರಂಭದಲ್ಲೇ ಮಳೆಗಾಲದ ಲಕ್ಷಣಗಳು ಕಂಡುಬಂದಿದ್ದು, ರವಿವಾರ ರಾತ್ರಿಯಿಂದಲೇ ಮಳೆ ಆರಂಭಗೊಂಡಿತ್ತು. ಸೋಮವಾರ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ.ಲಾಕ್‌ಡೌನ್ ಸಡಿಲಿಕೆಯ ಬಳಿಕ ಸೋಮವಾರ ಹೆಚ್ಚಿನ ಜನಸಂಚಾರ ಕಂಡುಬಂದಿದ್ದು, ಮಳೆಯ ಕಾರಣದಿಂದ ಜನ ಕೊಡೆ ಹಿಡಿದು ಸಾಗುವ ದೃಶ್ಯ ಕಂಡುಬಂತು. ತುಂತುರು ಮಳೆಯಾಗಿ ಸುರಿದಿದ್ದು, ಆಗಾಗ ಬಿಸಿಲು ಕೂಡ ಕಂಡುಬಂತು.IMG-20200205-WA0016
ಕಳೆದ   ವರ್ಷ ಹೊತ್ತಿನಲ್ಲಿ ನೀರಿಲ್ಲದೆ ಭಣಗುಡುತ್ತಿದ್ದ ತುಂಬೆ ಡ್ಯಾಂನಲ್ಲಿ ಈ ವರ್ಷ ನೀರು ತುಂಬಿದೆ.ಪ್ರಸಕ್ತ ತುಂಬೆ ಡ್ಯಾಂನಲ್ಲಿ 5.50 ಮೀ.ನೀರು ಸಂಗ್ರಹವಾಗಿದ್ದು,ಜತೆಗೆ ಶಂಭೂರು ಎಎಂಆರ್ ಡ್ಯಾಂನಲ್ಲಿ 18.90 ಮೀ.ನೀರಿದ್ದು,ಈ ಬಾರಿ ಕುಡಿಯುವ ನೀರಿಗೆ ಆತಂಕಪಡುಬೇಕಾಗಿಲ್ಲ.ಕೆಲದಿನಗಳ ಹಿಂದೆ ತುಂಬೆ ಡ್ಯಾಂನಲ್ಲಿ 6 ಮೀ.ವರೆಗೂ ನೀರು ನಿಲ್ಲಿಸಲಾಗಿತ್ತು.ಮಳೆ ಸುರಿಯುವ  ಹಿನ್ನಲೆಯಲ್ಲಿ ಆರ್ಧ ಮೀ.ನೀರು ಕಡಿಮೆ ಮಾಡಲಾಗಿದೆ.ಮುಂದೆ ಮಳೆಯ ಪರಿಸ್ಥಿತಿಯನ್ನು ಗಮನಿಸಿಕೊಂಡು ಡ್ಯಾಂನ ಗೇಟ್ ಎತ್ತುವ ಕಾರ್ಯ ನಡೆಯಲಿದೆ.

By suddi9

Leave a Reply

Your email address will not be published. Required fields are marked *