ಬಂಟ್ವಾಳ: ಭಾನುವಾರ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈದ ಕಲ್ಲಡ್ಕ ಕೊಳಕೀರುವಿನ ಯುವಕ ನಿಶಾಂತ್ ಅವರ ರಕ್ಷಣೆಗೆ ನದಿಗೆ ಹಾರಿದ ಗೂಡಿನ ಬಳಿಯ ಐದು ಮಂದಿ ಯುವಕರಿಗೆ ಬಂಟ್ವಾಳ ಜೇಸಿಐ ವತಿಯಿಂದ ಸೋಮವಾರ ಗೌರವ ಸಲ್ಲಿಸಲಾಯಿತು.

ಭಾನುವಾರದ ರಕ್ಷಣಾ ಕಾರ್ಯಚರಣೆಯನ್ನು ಕಣ್ಣಾರೆ ಕಂಡ ಜೆಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ ಯುವಕರ ಮಾನವೀಯ ಕಾರ್ಯವನ್ನು ಅಭಿನಂಧಿಸಿ ಕೃತಜ್ಞತೆ ವ್ಯಕ್ತ ಪಡಿಸಿದ್ದಾರೆ. ಅವರು ಮಾತನಾಡಿ ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎನ್ನುವ ಮನೋಭಾವನೆಯಿಂದ ಈ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಹಾರಿ ಯುವಕನ ರಕ್ಷಣೆಗೆ ಪ್ರಯತ್ನಿಸಿರುವುದು ಅಭಿನಂದನೀಯ. ಅವರನ್ನು ಗೌರವಿಸುವುದು ನಾಗರೀಕರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭ ಜೇಸಿಐ ಬಂಟ್ವಾಳದ ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸುರೇಶ್ ಕುಮಾರ್ ನಾವೂರು, ಸಂದೀಪ್ ಸಾಲ್ಯಾನ್, ಯತೀಶ್ ಕರ್ಕೆರಾ, ಉಮೇಶ್ ಮೂಲ್ಯ, ಗಣೇಶ್ ಕುಲಾಲ್, ವಿಜಯ ಕುಲಾಲ್, ರೋಷನ್ ರೈ ಮೊದಲಾದವರಿದ್ದರು.
