ಗುರುಪುರ : ಪ್ರಸ್ತುತ ಲಾಕ್‍ಡೌನ್ ಚಾಲ್ತಿಯಲ್ಲಿರುವುದರಿಂದ ಗುರುಪುರದ ಜಿ ಸುಧೀರ್ ಕಾಮತ್ ಮತ್ತು ಜಿ ಸ್ಮಿತಾ ಕಾಮತ್ ದಂಪತಿಯ ಪುತ್ರ ಸೃಜನ್‍ನ ಬ್ರಹ್ಮೋಪದೇಶವು ಜಿ ರಮಾನಾಥ ಭಟ್ ಪೌರೋಹಿತ್ಯದಲ್ಲಿ ಗುರುಪುರದ ಸ್ವಗೃಹದಲ್ಲಿ ಆಯ್ದ ಅತಿಥಿ-ಅಭ್ಯಾಗತರ ಉಪಸ್ಥಿತಿಯಲ್ಲಿ ಅತಿ ಸರಳ ರೀತಿಯಲ್ಲಿ ಜರುಗಿತು.
ಮನೆಗೆ ಆಗಮಿಸಿದ ಎಲ್ಲ ಬೆರಳೆಣಿಕೆ ಸದಸ್ಯರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಸರ್ಕಾರದ ಮಾರ್ಗಸೂಚಿಯಂತೆ ಸ್ಯಾನಿಟೈಸರ್ ಬಳಸಲಾಗಿ, ಬಂದವರೆಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಂಧುಮಿತ್ರರು ಯೂಟ್ಯೂಬ್ ಲೈವ್ ಮೂಲಕ ಮಾ. ಸೃಜನ್‍ಗೆ ಶುಭ ಹಾರೈಸಿದರು. ವಿಶೇಷವೆಂದರೆ, ಜಿ ಸ್ಮಿತಾರು ಲಾಕ್‍ಡೌನ್ ವೇಳೆ ಮನೆಯಲ್ಲೇ ಮಾಸ್ಕ್ ಹೊಲಿದು, ಮೂಳೂರು ಮತ್ತು ಅಡ್ಡೂರು ಗ್ರಾಮದ ನೂರಾರು ಮಂದಿಗೆ ಉಚಿತವಾಗಿ ಹಂಚುತ್ತಿದ್ದಾರೆ.
