ಮಂಗಳೂರು: ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಹಿರಿಯ ಉಪ ಸಂಪಾದಕಿಯಾಗಿ ಸೇವೆ ಸಲ್ಲಿಸುತ್ತಿದ್ದ  ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ (44) ಮಂಗಳವಾರ ರಾತ್ರಿ ನಿಧನರಾದರು. ತಂದೆ ಹಿರಿಯ ಸಾಹಿತಿ ವಿ.ಗ.ನಾಯಕ, ತಾಯಿ ಸಹಿತ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಡಾ.ಸೀತಾಲಕ್ಷ್ಮಿ ನಿಧನಕ್ಕೆ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂತಾಪ ವ್ಯಕ್ತಪಡಿಸಿದೆ.cf93964c-5c7b-4b99-8215-e2d351683def
ಡಾ.ಸೀತಾ ಲಕ್ಷ್ಮೀ ನಿಧನಕ್ಕೆ ಶ್ರದ್ಧಾಂಜಲಿ  ಸಭೆ
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯೆ  ಡಾ. ಸೀತಾ ಲಕ್ಷ್ಮೀ ಕರ್ಕಿಕೋಡಿ  ನಿಧನಕ್ಕೆ ಶ್ರದ್ಧಾಂಜಲಿ ಸಭೆ ಗುರುವಾರ (ಮೇ 14) ಬೆಳಗ್ಗೆ 11:೦೦ ಗಂಟೆಗೆ ಪತ್ರಿಕಾ ಭವನದಲ್ಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *