ಬಂಟ್ವಾಳ: ಕಸ್ಬಾ ಗ್ರಾಮದ ಆಗ್ರಾರ್ ಮೇಲಿನ ಪೊಣ್ಣಂಗಿಲ ಪೊಲ್ತೋಡಿ ಚಾಲ್೯ ವೆಲೇರಿಯನ್ ಪ್ರಾಂಕ್ (73) ಅವರು ಸೋಮವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಗತಿಪರ ಕೃಷಿಕ,ಕಂಬಳಾಭಿಮಾನಿ,ಸಾಮಾಜಿಕ ಕಾರ್ಯಕರ್ತರಾಗಿರುವ ಅವರು,ಪಶುಪಾಲನರಾಗಿದ್ದು,ಪಶುಗಳ ಪ್ರಸವ ಕಾರ್ಯದಲ್ಲು ಪರಿಣತರಾಗಿದ್ದಾರೆ. ಬಂಟ್ವಾಳ ಮಂಡಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ಮೃತರು ಜಿಲ್ಲಾ ವಿದ್ಯುತ್ ಮತ್ತು ನದಿನೀರು ಬಳಕೆದಾರರ ಹಿತರಕ್ಷಣಾ ಸಮಿತಿ ಸದಸ್ಯರಾಗಿದ್ದಾರೆ.
ಸೈಂಟ್ ವಿಶೇಂತ್ ಪಾವ್ಲ್ ಲೊರೆಟ್ಟೋ ಘಟಕದ ಸ್ಥಾಪಕರಾಗಿ ಸಿಮಾರು 26 ವರ್ಷಗಳ ಕಾಲ ಅಸರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ,ಮಕ್ಕಳು,ಅಳಿಯ ರೋನ್ಸ್ ಬಂಟ್ವಾಳ,ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
