ಬೆಳ್ತಂಗಡಿ: ಸರಕಾರಿ ಪ್ರಥಮ ದಜರ್ೆ ಕಾಲೇಜು ಬೆಳ್ತಂಗಡಿ ಇಲ್ಲಿ ಎನ್ಸಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಶೈಲೇಶ್ ಕುಮಾರ್ ಇವರು ಒಟಿಎ-ಕಾಂಪ್ಟಿ, ನಾಗಪುರ ಹಾಗೂ ನೇವಲ್ ಟ್ರೈನಿಂಗ್ ಬೇಸ್ ಕೊಚ್ಚಿನ್ ಇಲ್ಲಿ ಮೂರು ತಿಂಗಳ ಕಾಲ ಎನ್.ಸಿ.ಸಿ ಅಧಿಕಾರಿಗಳ ತರಬೇತಿಯಲ್ಲಿ ಪಾಲ್ಗೊಂಡು ಅತ್ಯುತ್ತಮ ಎನ್.ಸಿ.ಸಿ ಅಧಿಕಾರಿಯಾಗಿ ಪುರಸ್ಕೃತರಾಗಿದ್ದಾರೆ.
ವಿವಿಧ ರೀತಿಯ ತರಬೇತಿಯನ್ನು ಪಡೆದು ಸಬ್ ಲೆಪ್ಟಿನೆಂಟ್ ಅಧಿಕಾರಿಯಾಗಿ ಭಡ್ತಿ ಪಡೆದಿದ್ದಾರೆ. ಇವರು ಕನರ್ಾಟಕ ಮತ್ತು ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿ ಡೆಪ್ಯುಟಿ ಡೈರಕ್ಟರೇಟ್ ಜನರಲ್ ಎ.ಕೆ.ಚಕ್ರವತರ್ಿ ಇವರಿಂದ ಬೆಸ್ಟ್ ಪೆರೇಡ್ ಕಮಾಂಡರ್ ಪ್ರಶಸ್ತಿ ಪಡೆದಿದ್ದಾರೆ.

