ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಕೋರೋನ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯಬಿದ್ದರೆ ಮುಲಾಜಿಲ್ಲದೆ ಕಠಿಣಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಬಂಟ್ವಾಳ ಕಸ್ಬಾ ಗ್ರಾಮ ಹಾಗೂ ಗ್ರಾಮೀಣಭಾಗದಲ್ಲಿ ಕೋರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸಚಿವರು ಸಂಸದರು,ಶಾಸಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದರು. IMG-20200426-WA0039

ಬಂಟ್ವಾಳದಲ್ಲಿ ವಿನಾಯಿತಿ ಇಲ್ಲ:

ಮೇ.3 ರವರೆಗೆ ಬಂಟ್ವಾಳದಲ್ಲಿ ಲಾಕ್ ಡೌನ್ ಗೆ ವಿನಾಯತಿ ಇರುವುದಿಲ್ಲ,ಕಸ್ಬಾ ಗ್ರಾಮದಲ್ಲಿ 92 ಹಾಗೂ ನರಿಕೊಂಬು ಗ್ರಾಪಂ.ವ್ಯಾಪ್ತಿಯಲ್ಲಿ 213 ಮನೆಗಳನ್ನು ಪ್ರತಿನಿತ್ಯ ಆಶಾ ಕಾರ್ಯ ಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಭೇಟಿನೀಡಬೇಕು,ಬಂಟ್ವಾಳ ಕಸ್ಬಾ ಹಾಗೂ ನರಿಕೊಂಬು ಗ್ರಾಪಂ ವ್ಯಾಪ್ತಿಯಲ್ಲಿಲಾಕ್ ಡೌನ್ ನಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.

ಲಘವಾಗಿ ಪರಿಗಣಿಸದಿರಿ:

ದ.ಕ.ಜಿಲ್ಲೆಯಲ್ಲಿ ಒಟ್ಟು 19 ಕೋವಿಡ್ ಪ್ರಕರಣ ವರದಿಯಾಗಿದ್ದು,ಇದರಲ್ಲಿ 12ಪ್ರಕರಣಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.ಇಬ್ಬರು ಸಾವನ್ನಪ್ಪಿದ್ದು,ಉಳಿದ ಪ್ರಕರಣಗಳಲ್ಲಿ ನಿಗಾವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಈ ನಡುವೆ ಕಣ್ಣೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ 198 ಸಿಬ್ಬಂದಿಗಳು ಹಾಗೂ ಇನ್ನಿತರರನ್ನು ವೈದ್ಯಕೀಯ ಪರಿಒಕಗಷೆಗೊಳಪಡಿಸಲಾಗಿದೆ.ಈ ಪೈಕಿ 49 ಪ್ರಕರಣಗಳು ವರದಿಯಾಗಿದ್ದು ,48 ನೆಗೆಟೀವ್,1 ಫಾಸಿಟಿವ್ ವರದಿ ಬಂದಿದೆ.ಜಿಲ್ಲಾಡಳಿತದ ಪೂರ್ಣ ಕಣ್ಗಾವಲಿನಲ್ಲಿ ಕೋರೋನ ನಿಯಂತ್ರಣ ಮಾಡಲಾಗಿದೆ.ಸಾರ್ವಜನಿಕರು ಯಾವುದೇ ಕಾರಣಕ್ಕು ಲಘವಾಗಿ ಪರಿಗಣಿಸದೆ ಸ್ವಯಂಪ್ರೇರಿತವಾಗಿ ಕಪ್ಯೂ೯ಗೆ ಒಳಪಡಬೇಕು ಎಂದು ಮನವಿ ಮಾಡಿರುವ ಸಚಿವರು ಅನೀವಾರ್ಯವಾದರೆ ಕಠಿಣಕ್ರಮಕ್ಲೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ದ. ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಸಹಾಯಕ ಆಯುಕ್ತ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು  ಆರೋಗ್ಯಾಧಿಕಾರಿ ದೀಪಾ  ಪ್ರಭು,ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್, ಪುರಸಭಾ ಮುಖ್ಯಾಧಿಕಾರಿ  ಲೀನಾ ಬ್ರಿಟ್ಟೋ ಉಪಸ್ಥಿತರಿದ್ದು,  ಪೂರಕ ಮಾಹಿತಿ  ನೀಡಿದರು.

By suddi9

Leave a Reply

Your email address will not be published. Required fields are marked *