ಉಡುಪಿ:ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇದರ ವತಿಯಿಂದ ಜಿಲ್ಲಾಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರ ಇದರ ಆಶ್ರಯದಲ್ಲಿ ಜಿಲ್ಲಾ ಗ್ರಂಥಾಲಯ ನೂತನ ಕಟ್ಟಡದಲ್ಲಿ ಎ.25 ರಂದು ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಐಎಂಎ ಉಡುಪಿ ಅದ್ಯಕ್ಷ ಡಾ|| ಉಮೇಶ್ ಪ್ರಭು,ಕೋವಿಡ್ ಪರಿಣಾಮ ಎಲ್ಲಾ ಕಡೆಗಳಲ್ಲಿ ರಕ್ತದ ಅಭಾವವಿದೆ ಎದನ್ನು ಮನಗೊಂಡು ಹೆಚ್ಚಿನ ಜನರು ರಕ್ತದಾನ ಮಾಡುವಲ್ಲಿ ಮುಂದೆ ಬರಬೇಕಾಗಿದೆ ಈ ನಿಟ್ಟಿನಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘ ದ ಕಾರ್ಯ ಶ್ಯಾಘನೀಯ ಎಂದರು.
ಜಿಲ್ಲಾಸ್ಪತ್ರೆಯ ಸಹಾಯಕ ಸರ್ಜನ್ ಡಾ|| ಚಂದ್ರಶೇಖರ್ ಅಡಿಗ,ಡಾ|| ಬಿಸು ನಾಯ್ಕ ಡಾ|| ವೀಣಾ ಕುಮಾರಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಯಂಟ್ಸ್ ಫೆಡರೇಶನ್ ಮಾಜಿ ಅದ್ಯಕ್ಷ ಮಧುಸೂಧನ್ ಹೇರೂರು,ಸತೀಶ್ ಹೆಗ್ಡೆ ಕೋಟ,ಪ್ರಸನ್ನ ಕಾರಂತ್,ಅಣ್ಣಯ್ಯದಾಸ್,ಶ್ರೀನಾಥ್ ಕೋಟ,ಚಂದ್ರಶೇಖರ ಆಚಾರ್ಯ,ಪ್ರಕಾಶ್ ಆಚಾರ್ಯ,ದೇವೇಂದ್ರ ಶ್ರೀಯಾನ್,ಮಂಜುನಾಥ್ ಕಾರಂತ್,ವಿಲ್ಪ್ರೆಡ್ ಫೆರ್ನಾಂಡಿಸ್,ಪ್ರಕಾಶ್ ಶೇಟ್,ಸುಬ್ರಮಣ್ಯ ಮುಂತಾದವರಿದ್ದರು.ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
