ಯಾದಗಿರಿ: ಜಿಲ್ಲೆಯ ಸುರಪುರದ ವಿವಿಧ ಗ್ರಾಮಗಳ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿದ್ದ ರೈತರಿಗೆ, ಹಿರಿಯರನ್ನು ತಡೆದು, ಅವರಿಗೆ ಕೊರೊನಾ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಸ್ವತಃ ತಾವೇ ಮಾಸ್ಕ್ ಹಾಕಿ, ಮಾಸ್ಕ್ ಮಹತ್ವವನ್ನು ಹಳ್ಳಿಗರಿಗೆ ತಿಳಿಸುವ ಕಾರ್ಯಕ್ಕೆ ಸುರಪುರ ಠಾಣೆಯ ಪಿಎಸ್ ಐ ಚೇತನ್ ಮುಂದಾಗಿದ್ದಾರೆ.

ಯಾದಗಿರಿಯಲ್ಲಿ ಇಲ್ಲಿಯ ತನಕ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಇದರಿಂದ ಜಿಲ್ಲೆ ಗ್ರೀನ್ ಜೋನ್ ನಲ್ಲಿದೆ, ಇದರಿಂದ ಸಹಜವಾಗಿಯೆ ಕೆಲವೊಂದು ಸಡಲಿಕೆ ಮಾಡಲಾಗಿದೆ. ಇದರಿಂದಾಗಿ ಇಷ್ಟು ದಿನ ಮನೆಯಲ್ಲಿದ್ದ ಹಳ್ಳಿಗರು ವ್ಯಾಪಾರಕ್ಕಾಗಿ ನಗರದತ್ತ ಬರುತ್ತಿದ್ದಾರೆ.ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಠಿಕ್ಕಾಣಿ ಹಾಕಿರುವ ಸುರಪುರ PSI ಚೇತನ ಮತ್ತು ಸಿಬ್ಬಂದಿ ಜೊತೆ ಸೇರಿ ನಗರಕ್ಕೆ ಬರುವ ರೈತರಿಗೆ, ಹಿರಿಯರಿಗೆ ಕೊರೊನಾ ಜಾಗ್ರತೆ ಮೂಡಿಸಲು ಮುಂದಾಗಿದ್ದಾರೆ. ಈ ವೇಳೆ ಮಾಸ್ಕ್ ಇಲ್ಲದೆ ಬರುವವರಿಗೆ ಸ್ವತಃ ತಾವೇ ಮಾಸ್ಕ್ ಕೊಟ್ಟು, ಅದರ ಬಳಕೆ ‌ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸರ ಈ‌ ಕಾರ್ಯಕ್ಕೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *