ಬೈಲಹೊಂಗಲ: ವಸ್ತುನಿಷ್ಠ ಪತ್ರಕರ್ತರಿಗೆ ಯಾವಾಗ ನ್ಯಾಯ ಸಿಗುತ್ತದೆ ಅವರಿಗೆ ಅನ್ಯಾಯವಾದರೆ ಹಲ್ಲೆ ಗೊಳಗಾದರೆ ಬೆದರಿಕೆಗಳ ಕರೆ ಬಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತದೆ. ಪತ್ರಕರ್ತರಿಗೆ ಹಾಗೂ ಮತ್ತು ವರದಿಗಾರರಿಗೆ ನ್ಯಾಯ ಕೊಡಿಸಿ ಭದ್ರತೆ ಒದಗಿಸಿ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಆಗ್ರಹಿದ್ದಾರೆ.
ರಾಜ್ಯದಾದ್ಯಂತ ಮತ್ತು ಭಾರತ ದೇಶದಾದ್ಯಂತ ಇರುವ ಪತ್ರಕರ್ತರಿಗೆ ಹಾಗೂ ಸಂಪಾದಕರುಗಳಿಗೆ ಅನ್ಯಾಯ ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಹೆಚ್ಚಾಗುತ್ತಿದೆ ಆದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಇನ್ನು ಯಾವ ರೀತಿಯ ಪರಿಹಾರ ಕಲ್ಪಿಸಿಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.
ಪತ್ರಿಕಾರಂಗ ಮೀಡಿಯಾ ಡಿಜಿಟಲ್ ಮೀಡಿಯಾ ಯಾವುದೇ ಮೀಡಿಯಾ ಆಗಿರಬಹುದು ಯಾವುದೇ ಪತ್ರಿಕೆ ಆಗಿರಬಹುದು ವೆಬ್ ಮತ್ತೆ ಯುಟ್ಯೂಬ್ ಚಾನಲ್ ಆಗಿರಬಹುದು ಇವರೆಲ್ಲರಿಗೂ ಸರಕಾರದಿಂದ ಗೌರವ ಧನ ಸಿಗಬೇಕು ಮತ್ತು ಎಲ್ಲ ಮಧ್ಯಮ ಮಿತ್ರರಿಗೆ ಸರಕಾರ ಮನೆಗಳನ್ನು ನೀಡಬೇಕು ಹಾಗೂ ಇವರಿಗೆ ಸರಕಾರ ವಿಶೇಷವಾದ ಪ್ಯಾಕೇಜನ್ನು ನೀಡಬೇಕು ನೀಡಿ ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಬೇಕು. ಯಾಕಂದರೆ ಎಷ್ಟೋ ಪ್ರಾಮಾಣಿಕ ಪತ್ರಕರ್ತರು ಸಂಬಳ ವಿಲ್ಲದೆ ಹಗಲು ರಾತ್ರಿ ತಮ್ಮ್ ಖಡ್ಗ ದಂತಿರುವ ಲೇಖನಿಯಿಂದ ಸಮಜದಲ್ಲಿ ನಡೆದಿರುವ ನಿಜ ಸಂಗತಿಯನ್ನು ಜಗತ್ತಿಗೆ ತೋರಿಸುವವರು ಈ ಮಹನು ಬಾವರು. ಎಷ್ಟೋ ಜನ ಸ್ವಂತ್ ಮನೆ ಇಲ್ಲದೆ ಬಾಡಿಗೆ ಮನೇಲಿ ಇದ್ದು ಪತ್ರಿಗೆ ಕೆಲಸ ಮಾಡುವರು ಮತ್ತು ಪಾಪ ಅವರ ಮೊಬೈಲ್ ರಿಚಾರ್ಜ್ಗು ಹಣ ವಿಲ್ಲದ ಪರಿಸ್ಥಿತಿ ಬರುತ್ತೆ. ಉದಾ : *ಅಥಣಿಯ ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತ ಮಹೇಶ ಶರ್ಮಾ* ಅವರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಎಷ್ಟೇ ತೊಂದರೆ ಇದ್ದರು ಕೂಡಾ ಪತ್ರಿಕಾ ಕೆಲಸ ಬಿಟ್ಟಿಲ್ಲ ಇದೆ ರೀತಿ ರಾಜ್ಯದಲ್ಲಿ ಸುಮಾರು ಜನ ಪತ್ರಕರ್ತರು ಇದ್ದಾರೆ ಆದರಿಂದ ಮಾಧ್ಯಮ ವೃತ್ತಿಯಲ್ಲಿರುವ ಎಲ್ಲರಿಗೂ ಸರಕಾರ ಸಹಾಯ ಮಾಡಿ ಅವರ ಬೆನ್ನಿಗೆ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.

