ಬಂಟ್ವಾಳ: ಬೆಂಗಳೂರು  ನಗರದ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈಂನ್ ಗಾಗಿ ಶೋಧನೆ ಮಾಡಲು ಹೋದ  ವೈದ್ಯರು, ಆಶಾ ಕಾರ್ಯಕರ್ತೆಯರು ,ಪೋಲಿಸ್ ಅಧಿಕಾರಿಗಳು,ಸಿಬ್ಬಂದಿಗಳ ಮೇಲೆ  ಹಲ್ಲೆ ನಡೆಸಿ ದಾಂಧಲೇ ಮಾಡಿರುವುದನ್ನು ಸಮರ್ಥಿಸಿಕೊಂಡ  ಶಾಸಕ ಜಮೀರ್ ಅಹಮ್ಮದ್ ರವರ ವರ್ತನೆ  ಬೇಜಾವಬ್ದಾರಿತನದಿಂದ ಕೂಡಿದ್ದಲ್ಲದೆ ಶಾಸಕತ್ವಕ್ಕೆ ಅಪಮಾನವಾಗಿದೆ ತಕ್ಷಣ ಅವರ ವಿರುದ್ಧ ರಾಷ್ಟ್ರದ್ರೋಹ ಕೇಸ್ ದಾಖಲಿಸಿ ಬಂಧಿಸಲು ಸೂಚನೆ ನೀಡಬೇಕು ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರನ್ನು ಪತ್ರದ ಮೂಲಕ ಆಗ್ರಹಿಸಿದ್ದಾರೆ.
 ಶಾಸಕ ಜಮೀರ್ ಅವರ ಈ ನಡವಳಿಕ ಕರ್ನಾಟಕ ರಾಜ್ಯದ 223   ಶಾಸಕರಿಗೂ ಅವಮಾನವಾಗಿದೆ.ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ   ಗೂಂಡಾಗಿರಿ  ಶಾಸಕ ಜಮೀರ್ ಅಹಮ್ಮದ್ ರವರನ್ನು ರಾಷ್ಟ್ರ ದ್ರೋಹದಡಿಯಲ್ಲಿ  ಬಂಧಿಸಿ, ಇವರ ಪೂರ್ವಾಪರ  ಸಂಪೂರ್ಣ ವಾಗಿ ಅಂತರೀಕ ತನಿಖೆ ನಡೆಸ ಬೇಕು, ಸಾರ್ವಜನಿಕ ವಾಗಿ ದುರ್ನಡತೆ ಕಲಂನಡಿಯಲ್ಲಿ  ಶಾಸಕತ್ವ ಅನರ್ಹ ಗೋಳಿಸಬೇಕು. ಕೊರೊನಾ ಸಂಶಯವಿರುವುದರಿಂದ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪತ್ರದ ಪ್ರತಿಯನ್ನು  ಪ್ರಧಾನಿ ನರೇಂದ್ರಮೋದಿ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ,ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಶಾಸಕ ರಾಜೇಶ್  ನಾಯ್ಕ್ ಅವರಿಗೂ ರವಾನಿಸಿದ್ದಾರೆ.

By suddi9

Leave a Reply

Your email address will not be published. Required fields are marked *